ಕುಶಾಲನಗರ ತಾಲೂಕು ಪತ್ರಕತ೯ರ ಸಂಘದಿಂದ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ

ಕುಶಾಲನಗರ ತಾಲೂಕು ಪತ್ರಕತ೯ರ ಸಂಘದಿಂದ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ

ಮಡಿಕೇರಿ : ಕೊಡಗಿನಲ್ಲಿ ಕೃಷಿ, ಕಾಫಿ, ಏಲಕ್ಕಿ, ಕಾಳು ಮೆಣಸು ಸೇರಿದಂತೆ ಪ್ರಮುಖ ಕೖಷಿ ಇಂದು ತೀವ್ರ ಸಂಕಷ್ಟದಲ್ಲಿದ್ದು, ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮದ ಮೂಲಕ ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ ಮತ್ತು ಪ್ರವಾಸಿಗರಿಗೆ ಅದ್ಭುತ ಅನುಭವ ಹಲವಾರು ಅವಕಾಶಗಳಿವೆ ಎಂದು ಬ್ಯಾಂಕಿಂಗ್, ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತು ವೃತ್ತಿ ಮಾಗ೯ದಶ೯ಕ, ಆರ್.ಕೆ.ಬಾಲಚಂದ್ರ  

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಮಂಗಳವಾರ ಕುಶಾಲನಗರ ಗೌಡ ಸಮಾಜದಲ್ಲಿ ಆಯೋಜಿಸಿದ್ದ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ ಕರ‍್ಯಕ್ರಮದಲ್ಲಿ ಅವರು ‘ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮ-ಹಲವು ಆಯಾಮಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕೊಡಗಿನಲ್ಲಿ ಸುಮಾರು 1.05 ಲಕ್ಷ ಹೆಕ್ಟೇರ್ ಕಾಫಿ ತೋಟವಿದೆ. ಭಾರತದ ಒಟ್ಟು ಕಾಫಿ ಉತ್ಪಾದನೆಯ ಸುಮಾರು ಶೇ.30ರಷ್ಟು ಇಲ್ಲೇ ಬೆಳೆಯುತ್ತದೆ. ಆದರೆ ಕಳೆದ ಎರಡು ದಶಕಗಳಲ್ಲಿ ಕಾಫಿ ಬೆಲೆಯ ಏರಿಳಿತ, ಹವಾಮಾನ ಬದಲಾವಣೆ, ಕೂಲಿ ಕರ‍್ಮಿಕರ ಕೊರತೆ, ಕಾಡಾನೆ ಹಾವಳಿ ಇವೆಲ್ಲ ರೈತರ ನಿದ್ದೆ ಕೆಡಿಸಿವೆ. 2018ರ‌ ಭೀಕರ ಪ್ರವಾಹ ಮತ್ತು ಭೂಕುಸಿತ ಕೊಡಗಿನ ಕೃಷಿಕರನ್ನು‌ ಹೈರಾಣಾಗಿಸಿದೆ. ಇದರಿಂದಾಗಿ ಯುವ ತಲೆಮಾರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ತೋಟ ಉಳಿಸಿಕೊಳ್ಳಲು ದಾರಿ ಕಾಣದೆ ಕಾಫಿ ಬೆಳೆಗಾರರ ಮಕ್ಕಳು ಬೆಂಗಳೂರಿನಲ್ಲಿ ಕಾಫಿ ಮಾರುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಅವರು ಹೇಳಿದರು.

ಆದರೆ ಕೊಡಗಿನ ರೈತರು ಮನಸ್ಸು ಮಾಡಿದರೆ ಕೃಷಿ ಪ್ರವಾಸೋದ್ಯಮದ ಮೂಲಕ ಬೆಂಗಳೂರಿಗರೇ ಇಲ್ಲಿನ ರೈತರ ಬಳಿ ಬರುವಂತೆ ಮಾಡಬಹುದು ಎಂದು ನುಡಿದರು.

ಕೃಷಿ ಪ್ರವಾಸೋದ್ಯಮ ಎಂಬುದು ಒಂದು ದಾಶ೯ನಿಕ ಕಲ್ಪನೆ.ಯಾಗಿದೆ. ಸರಳವಾಗಿ ಹೇಳಬೇಕೆಂದರೆ ಕೃಷಿ ಚಟುವಟಿಕೆಗಳಲ್ಲಿ ಪ್ರವಾಸಿಗರನ್ನು ಭಾಗಿಯಾಗಿಸಿ, ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ, ಮತ್ತು ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುವ ವ್ಯವಸ್ಥೆ. ಇದು ಪ್ರಸಕ್ತ ಕೊಡಗಿನಲ್ಲಿರುವ ಕೇವಲ ತೋಟ ನೋಡಿ ಹೋಗುವುದಲ್ಲ. ತೋಟದ ನಡಿಗೆ ಕೊಯ್ಲು ಚಟುವಟಿಕೆ ಸಾವಯವ ಕೃಷಿ ತರಬೇತಿ, ತಳಿ ಸಂರಕ್ಷಣೆ ಮತ್ತು ಜೀವ ವೈವಿಧ್ಯ ಪ್ರವಾಸ ,ಗ್ರಾಮೀಣ ಆಹಾರ ಪದ್ದತಿಯ ಅನುಭವ ಸ್ಥಳೀಯ ಸಂಸ್ಕೃತಿ, ಕಲೆ, ಆಚಾರ-ವಿಚಾರ ಇವೆಲ್ಲವೂ ಸೇರಿದೆ. ಇದು ಪ್ರವಾಸಿಗನಿಗೆ ಕೇವಲ ಕಣ್ಣಿನ ಸಂತೋಷ ನೀಡುವುದಲ್ಲದೆ, ಆತ್ಮದ ತೃಪ್ತಿಯೂ ನೀಡುತ್ತದೆ ಎಂದು ಬಾಲಚಂದ್ರ ವಿವರಿಸಿದರು. ಈ ಸಂಬಂಧ ಅವರು ಇಂದಿನ ಸ್ಥಿತಿ, ಸಮಸ್ಯೆ ಮತ್ತು ಅವಕಾಶಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.

ಕರ‍್ಮಿಕರ ಕೊರತೆಗೆ ಪರಿಹಾರ: ಕೊಯ್ಲು ಸಮಯದಲ್ಲಿ ಕರ‍್ಮಿಕರ ಅಭಾವ ತೀವ್ರ. ಈ ಸಮಸ್ಯೆಗೆ ಕೃಷಿ ಪ್ರವಾಸೋದ್ಯಮ ಒಂದು ಆಸಕ್ತಿಕರ ಉತ್ತರ ಕೊಡಬಲ್ಲದು.ಪ್ರವಾಸಿಗರು ಸ್ವ-ಇಚ್ಛೆಯಿಂದ ಕೊಯ್ಲಿನಲ್ಲಿ ಭಾಗಿಯಾಗಿ ಪಾವತಿ ಮಾಡುತ್ತಾರೆ! ಅವರು ರೈತನಿಗೆ ಪಾವತಿ ಮಾಡಿ ಕೆಲಸ ಮಾಡುವುದರಿಂದ ಇದು ರೈತರಿಗೆ ಲಾಭದಾಯಕವಾಗಬಲ್ಲದು.ಮಳೆ ಅನಿಶ್ಚಿತತೆ ತಾಪಮಾನ ಏರಿಕೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೂ ಪ್ರವಾಸೋದ್ಯಮ ಒಂದು ಪ್ರಬಲ ಮಾಧ್ಯಮವಾಗಬಲ್ಲದು ಎಂದರು.

   ತೋಟಗಾರಿಕಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು - ಕೇಶವಕಾಮತ್;

  ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್,  

ದೇಶದ ಬೆನ್ನೆಲುಬರಾಗಿರುವ ರೈತರಿಲ್ಲದ ನಾಡನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯವಾಗಿದೆ. ಎಷ್ಟೇ ಆಧುನಿಕ ಸೌಲಭ್ಯಗಳಿದ್ದರೂ ಮನುಷ್ಯನಾದವನಿಗೆ ಅನ್ನ, ಆಹಾರಗಳಿಲ್ಲದೆ ಜೀವಿಸಲು ಸಾಧ್ಯವಿಲ್ಲ. ಇಂತಹ ಆಹಾರವನ್ನು ತನ್ನ ಶ್ರಮದ ಮೂಲಕ ಕಲ್ಪಿಸುವ ಕೖಷಿಕರಿಗೆ ಸಮಾಜ ಸದಾ ಕೖತಜ್ಞವಾಗಿರಬೇಕು ಮತ್ತು ಸರಕಾರಗಳು ನೆರವಿಗೆ ನಿಲ್ಲಬೇಕು ಎಂದು ಕೇಶವ ಕಾಮತ್ ಹೇಳಿದರು.

ನಗರ ಪ್ರದೇಶಗಳಿಗೆ ಯುವಜನರ ವಲಸೆ ಹೆಚ್ಚಾಗುತ್ತಿರುವುದರಿಂದಾಗಿ ಗ್ರಾಮೀಣ ಪ್ರದೇಶಗಳು ಹಿರಿಯರಿಗೆ ಮಾತ್ರ ಸೀಮಿತವಾಗಿ ವೃದ್ದಾಶ್ರಮಗಳಾಗುತ್ತಿದೆ ಎಂದು ವಿಷಾದಿಸಿದ ಅವರು, ಯುವಪೀಳಿಗೆ ತಮಗೆ ತಿಳಿದಿರುವ ಆಧುನಿಕ ಮಾಧ್ಯಮಗಳ ಉಪಯೋಗವನ್ನು ಕೖಷಿ ವಲಯದ ಪ್ರಗತಿಗೂ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.  

ಕೋವಿಡ್ ನಿಂದಾದ ಉತ್ತಮ ಸಂಗತಿ;

 ಕೊಡಗು ಪತ್ರರ‍್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಕೋವಿಡ್ ಕಾಲಘಟ್ಟದಲ್ಲಿ ಜರುಗಿದ ಕೆಲವು ಉತ್ತಮ ಸಂಗತಿಗಳಲ್ಲಿ, ನಗರದಿಂದ ಸ್ವಗ್ರಾಮಗಳಿಗೆ ಅನಿವರ‍್ಯವಾಗಿ ಮರಳಿ ಬಂದ ಯುವಪೀಳಿಗೆ ನಂತರದ ದಿನಗಳಲ್ಲಿ ಕೖಷಿಯತ್ತ ಆಸಕ್ತಿ ವಹಿಸಿರುವುದೂ ಒಂದಾಗಿದೆ. ಇಂದಿಗೂ ರ‍್ಕ್ ಫ್ರಂ ಹೋಂನಿಂದಾಗಿ ಅನೇಕರು ತೋಟಗಳಲ್ಲಿಯೇ ಇದ್ದುಕೊಂಡು ಉದ್ಯೋಗ ಮತ್ತು ಕೖಷಿಯನ್ನು ನರ‍್ವಹಿಸುತ್ತಿರುವುದು ಆಶಾದಾಯಕವಾಗಿದೆ ಎಂದರು.  

ಕೇರಳದಂತಹ ರಾಜ್ಯದಲ್ಲಿ ಕೖಷಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಆದ್ಯತೆ ನೀಡಲಾಗಿದೆ. ಎಲ್ಲಾ ರೀತಿಯಲ್ಲಿಯೂ ಕೊಡಗು ಕೃಷಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು, ಈ ನಿಟ್ಟಿನಲ್ಲಿ ಕೖಷಿಕರು ಮತ್ತು ಪ್ರವಾಸೋದ್ಯಮಿಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದೂ ಅನಿಲ್ ನುಡಿದರು.

ವನ್ಯಜೀವಿಗಳ ದಾಂಧಲೆ, ಸಂಕಷ್ಟಗಳ ನಡುವೆಯೂ ಕೃಷಿ ಭೂಮಿಯನ್ನು ನರ‍್ವಹಿಸಿಕೊಂಡು ಬರುತ್ತಿರುವ ಕೊಡಗಿನ ಬೆಳೆಗಾರರು ನಿಜವಾಗಿಯೂ ನೇಗಿಲು ಹಿಡಿದ ಯೋಗಿಗಳೇ ಹೌದೆಂದು ಬಣ್ಣಿಸಿದ ಅವರು, ರ‍್ಫೇಸಿ ಕಾಯಿದೆ ಜಾರಿಯಲ್ಲಿನ ಗೊಂದಲವನ್ನು ಕೇಂದ್ರ ಮತ್ತು ರಾಜ್ಯ ರ‍್ಕಾರಗಳು ಪರಿಹರಿಸಿ ಕಾಫಿ ತೋಟ ಮಾಲಕರ ಆತಂಕವನ್ನು ದೂರಮಾಡಬೇಕಾಗಿದೆ ಎಂದರು. ತಮ್ಮ ಕೖಷಿ ಭೂಮಿಯಲ್ಲಿ ಯಾವಾಗ ರಾಸಾಯನಿಕ ಸಿಂಪಡಣೆ ಮಾಡಬೇಕು, ಯಾವಾಗ ಹನಿ ನೀರಾವರಿ ನೀಡಬೇಕು ಎಂಬ ನರ‍್ಧಾರವನ್ನು ತೆಗೆದುಕೊಳ್ಳಲು ಕೊಡಗಿನ ಕಾಫಿ ಕೃಷಿಕರು ಸಮಥ೯ರಿದ್ದಾರೆ. ಈ ನಿಟ್ಟಿನಲ್ಲಿ ಕೖಷಿ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕ ಆದೇಶಗಳ ಮೂಲಕ ಮೂಗು ತೂರಿಸಬಾರದು ಎಂದೂ ಅನಿಲ್ ಈ ಸಂರ‍್ಭ ನುಡಿದರು.  

ಮತ್ತರ‍್ವ ಅತಿಥಿ, ಸುಂಟಿಕೊಪ್ಪದ ಉದ್ಯಮಿ ಎಸ್.ಜಿ. ಶ್ರೀನಿವಾಸ್ ಮಾತನಾಡಿ, ಕೃಷಿ ಎನ್ನವುದು ಬಹಳ ದೊಡ್ಡ ತತ್ವವಾಗಿದೆ. ಕೃಷಿಯಲ್ಲಿ ಕೆಲಸ ಮಾಡುತ್ತಲೇ ಕೆಲಸ ಕಲಿಯಲಾಗುತ್ತದೆ. ಹೀಗಾಗಿಯೇ ಕೃಷಿಕರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಎಂದರು.

 

ಆಹಾರದಲ್ಲಿ ಸ್ವಾವಲಂಬಿಯಾಗುವ ದೇಶ ಭವಿಷ್ಯದಲ್ಲಿ ಯಾರ ಮುಂದೆಯೂ ಕೈಯೊಡ್ಡುವ ಅಗತ್ಯವಿರುವುದಿಲ್ಲ. ಭಾರತ ಈಗ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದೂ ಅವರು ಹೇಳಿದರು. ಲಾಭದಾಯಕವಲ್ಲ ಎಂಬ ಕಾರಣದಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಅಬಿಪ್ರಾಯಪಟ್ಟ ಶ್ರೀನಿವಾಸ್, ಜಲದ ಅಭಾವ, ಕರ‍್ಮಿಕರ ಕೊರತೆ, ಸಾಲ ಬಾಧೆಗಳಿಂದ ಕೃಷಿಕರು ಸದಾ ನಲುಗುವಂತಾಗಿದೆ ಎಂದು ವಿಷಾದಿಸಿದ ಅವರು, ಇಂತಹ ಸಂರ‍್ಭಗಳಲ್ಲಿ ರ‍್ಕಾರ ವಿಳಂಬ ರಹಿತವಾಗಿ ಕೃಷಿಕ ರ‍್ಗದ ನೆರವಿಗೆ ಮುಂದಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ದಾನಿ, ಗುಡ್ಡೆಹೊಸೂರಿನ ಉದ್ಯಮಿ ಮಂಡೆಪಂಡ ಚಿಮ್ಮ ಉತ್ತಪ್ಪ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಕುಶಾಲನಗರ ಪತ್ರರ‍್ತರ ಸಂಘ ರೈತರಿಗಾಗಿ ರೂಪಿಸಿರುವ ನೇಗಿಲಯೋಗಿ ದತ್ತಿ ಪ್ರಶಸ್ತಿಗೆ ತಾನು ಕೂಡಾ 25 ಸಾವಿರ ರೂ.ಗಳನ್ನು ನೀಡುವುದಾಗಿ ಇದೇ ಸಂರ‍್ಭ ಘೋಷಿಸಿದರು.

ಚಿಕ್ಕಬೆಟ್ಟಗೇರಿಯ ಉದ್ಯಮಿ, ದಾನಿ ಎಂ.ಎಸ್.ರಂಜಿತ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಕುಶಾಲನಗರ ತಾಲೂಕು ಪತ್ರರ‍್ತರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮವನ್ನು ಸಂಘದ ಸಲಹೆಗಾರ ಕೆ.ತಿಮ್ಮಪ್ಪ ನಿರೂಪಿಸಿದರು. ಖಜಾಂಚಿ ಕೆ.ಎಸ್. ಅನಿಲ್ ಕುಮಾರ್ ಸ್ವಾಗತಿಸಿದರೆ, ನಿದೇ೯ಶಕರಾದ ಸಿಲ್ವೆಸ್ಟರ್ ಪ್ರಾಥಿ೯ಸಿ, ವಿಶ್ವಕುಮಾರ್, ರವಿಕುಮಾರ್, ಆಲ್‌ಫ್ರೆಡ್‌ ಅವರುಗಳು ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಉಪಾಧ್ಯಕ್ಷ ನವೀನ್ ಚಿಣ್ಣಪ್ಪ ವಂದಿಸಿದರು. ತಾಲೂಕು ಸಂಘದ ಪ್ರಧಾನ ಕರ‍್ಯರ‍್ಶಿ ವಿನ್ಸೆಂಟ್, ನರ‍್ದೇಶಕರಾದ ಶಿವಣ್ಣ, ಜಿ.ಕೆ.ಬಾಲಕೃಷ್ಣ, ಎಂ.ಎಸ್.ಸುನಿಲ್, ಸೋನ್ಸ್,‌ ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಮುದೋಷ್ ಪೂವಯ್ಯ ಮತ್ತಿತರರು ಹಾಜರಿದ್ದರು.

ಸಂತಾಪ: - ಗೌಡ ಸಮುದಾಯದ ಮುಖಂಡ, ಹಿರಿಯ ಲೇಖಕ ಅನಂತ ರಾಜೇಗೌಡ ಅವರ ನಿಧನಕ್ಕೆ ಪತ್ರಕತ೯ರ ಸಂಘದ ವತಿಯಿಂದ ಮೌನಾಚರಣೆ ಮೂಲಕ ಶೖದ್ದಾಂಜಲಿ ಸಲ್ಲಿಸಲಾಯಿತು.

ನೇಗಿಲ ಯೋಗಿಗಳು

  ನೇಗಿಲಯೋಗಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಪಿ. ಉದಯಕುಮಾರ್, ಕೃಷಿ ಮತ್ತು ಹೈನುಗಾರಿಕೆಗಾಗಿ ಮಳ್ಳೂರಿನ ಶಂಕರನಾರಾಯಣ, ಪ್ರಗತಿಪರ ಮಹಿಳಾ ಕೃಷಿಕರಾದ ಮಣಜೂರಿನ ಭವಾನಿ ಎಂ.ಜಿ.ಕುಮಾರಸ್ವಾಮಿ, ಬಾಳುಗೋಡುವಿ‌ನ ಸಮಗ್ರ ಕೃಷಿಕ ನಂಗಾರು ಜಗ ಅವರನ್ನು ಪ್ರಶಸ್ತಿ ಪ್ರದಾನ ಮಾಡಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳು ಗೌರವಿಸಿದರು.