ಪೋಷಣ್ ಮಾಸಾಚರಣೆ ಮತ್ತು ಪೌಷ್ಠಿಕ ಸಪ್ತಾಹ ಕಾರ್ಯಕ್ರಮ

ಪೋಷಣ್ ಮಾಸಾಚರಣೆ ಮತ್ತು ಪೌಷ್ಠಿಕ ಸಪ್ತಾಹ ಕಾರ್ಯಕ್ರಮ

ಶನಿವಾರಸಂತೆ:-ಪೋಷಣ್ ಮಾಸಾಚರಣೆ ಪ್ರಯುಕ್ತ ಸಮಿಪದ ದೊಡ್ಡಮಳ್ತೆ ಗ್ರಾ.ಪಂ. ವಳಗುಂದ ಅಂಗನವಾಡಿ ಸಭಾಂಗಣದಲ್ಲಿ ಪೌಷ್ಠಿಕ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು.

ದೊಡಮಳ್ತೆ ಗ್ರಾ.ಪಂ. ಅಧ್ಯಕ್ಷ ಗೋಪಾಲ್ ಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಮಿತಾ ಮಾತನಾಡಿ,ಗರ್ಭಿಣಿಯರು ಹೆಚ್ಚಾಗಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಸ್ಥಳೀಯವಾಗಿ ಸಿಗುವ ಹಣ್ಣು ಹಂಪಲು, ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳು ಮುಂತಾದವುಗಳಲ್ಲಿ ಪೌಷ್ಠಿಕಾಂಶ ಹೆಚ್ಚಾಗಿರುವುದ್ದರಿಂದ ಇವುಗಳನ್ನು ಸೇವಿಸುವುದ್ದರಿಂದ ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ವೃದ್ದಿಸುತ್ತದೆ ಎಂದರು. ಗರ್ಭಿಣಿಯರು ಪೌಷ್ಠಿಕಾಂಶ ಆಹಾರ ಸೇವಿಸುವ ಜೊತೆಯಲ್ಲಿ ಶಾಖಾಹಾರ ಗರ್ಭಿಣಿಯರು ಪೌಷ್ಠಿಕಾಂಶ ಒಳಗೊಂಡಿರುವ ಮೊಟ್ಟೆ, ಮೀನು, ಮೌಂಸವನ್ನು ಸೇವಿಸಬೇಕು ಇದರಿಂದ ಮಗುವಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂದು ಹೇಳಿದರು.

 ವಳಗುಂದ ಆಶಾ ಕಾರ್ಯಕರ್ತೆ ಈಶ್ವರಿ ಮಾತನಾಡಿ ಗರ್ಭಿಣಿಯರು ಮತ್ತು ಬಾಣಂತಿಯರು ಸರಿಯಾದ ಸಮಯಯಕ್ಕೆ ಚುಚ್ಚುಮದ್ದು ಮತ್ತು ಲಸಿಕೆಯನ್ನು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿದರು. ಸೋಮವಾರಪೇಟೆ ತಾಲೂಕು ಆರೋಗ್ಯ ಕೇಂದ್ರದ ನಮೃತ,ಮಮತಾ, ಚಂದ್ರ ವತಿ, ಅಂಗನವಾಡಿ ಕಾರ್ಯಕರ್ತೆ ಆಶಾ ಕಾರ್ಯಕರ್ತೆಯರು ಹಾಗೂ ಗರ್ಭಿಣಿ ಮತ್ತು ಬಾಣಂತಿಯರು ಮಕ್ಕಳು ಪಾಲ್ಗೊಂಡಿದ್ದರು.