ಡಾ ಮಂತರ್ ಗೌಡ ರವರಿಂದ ಸೇತುವೆ ಕಾಮಗಾರಿ ವೀಕ್ಷಣೆ

May 16, 2026 - 19:19
 0  635
ಡಾ ಮಂತರ್ ಗೌಡ ರವರಿಂದ ಸೇತುವೆ ಕಾಮಗಾರಿ ವೀಕ್ಷಣೆ

ಮಡಿಕೇರಿ;ವಿಧಾನ ಸಭಾ ಕ್ಷೇತ್ರದ 2ನೇ ಮೊಣ್ಣಂಗೇರಿ ಗ್ರಾಮದ ಚಪ್ಪೆಮನೆ ದಿವಾಕರ,ಅಬ್ದುಲ್ ರಜಾಕ್ ,ಮುಕ್ಕಾಟಿ ಸುರೇಶ್,ಯೋಗೇಶ್ ಪೂಜಾರಿ ಹಾಗೂ ಇತರರ ಮನೆಗೆ ಹೋಗುವ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ವೀಕ್ಷಣೆ ಮಾಡಿದರು.

ನಿರ್ಮಾಣದ ಅಂತಿಮ ಹಂತದಲ್ಲಿರುವ ಈ ಕಾಮಗಾರಿಗೆ 2025-26 ನೇ ಸಾಲಿನಲ್ಲಿ ಡಾ ಮಂತರ್ ಗೌಡ ರವರು 30 ಲಕ್ಷ ರೂಗಳ ಅನುದಾನ ಒದಗಿಸಿದ್ದಾರೆ.

 ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ವಲಯಾಧ್ಯಕ್ಷರಾದ ಸುಭಾಷ್ ಆಳ್ವ,ಪ್ರಮುಖರಾದ ವಿ.ಜಿ.ಮೋಹನ್,ಕೋಚನ ಹರಿಪ್ರಸಾದ್,ಆರ್.ಪಿ.ಚಂದ್ರಶೇಖರ್, ಬಾಳಾಡಿ ಪ್ರತಾಪ್,ಮುದಿಯಾರ್ ಗಣೇಶ್,ನರೇನ್ ಸೋಮಯ್ಯ, ದಿನೇಶ್ ಶೆಟ್ಟಿ,ಅರ್ಜುನ್, ಬಷೀರ್ ಸೇರಿದಂತೆ ಸ್ಥಳೀಯರು ಶಾಸಕರೊಂದಿಗೆ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0