ಮಾಂದಲ್‌ಪಟ್ಟಿಗೆ ಜೀಪ್‌ಗಳಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲು 2,500 ರೂ. ಮಾತ್ರ ನಿಗದಿ ಮಾಡಲಾಗಿದೆ; ಮಡಿಕೇರಿ ಜೀಪ್ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಉಣ್ಣಿಕೃಷ್ಣ

Feb 7, 2026 - 15:39
 0  656
ಮಾಂದಲ್‌ಪಟ್ಟಿಗೆ ಜೀಪ್‌ಗಳಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲು 2,500 ರೂ. ಮಾತ್ರ ನಿಗದಿ ಮಾಡಲಾಗಿದೆ; ಮಡಿಕೇರಿ ಜೀಪ್ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಉಣ್ಣಿಕೃಷ್ಣ

3ಮಡಿಕೇರಿ: ಮಾಂದಲ್‌ಪಟ್ಟಿಗೆ ಜೀಪ್‌ಗಳಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ೨,೫೦೦ ರೂ. ಮಾತ್ರ ನಿಗದಿ ಮಾಡಲಾಗಿದೆ ಎಂದು ಮಡಿಕೇರಿ ಜೀಪ್ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಉಣ್ಣಿಕೃಷ್ಣ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿ ಜೀಪ್ ಸಫಾರಿಗೆ ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರವಾಸಿಗರೊಬ್ಬರು ವೀಡಿಯೋವೊಂದನ್ನು ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಇದರ ಬೆನ್ನಲ್ಲೆ ಮಡಿಕೇರಿ ಜೀಪ್ ಚಾಲಕರ ಹಾಗೂ ಮಾಲೀಕರ ಸಂಘ ಮತ್ತು ನಂದಿಮೊಟ್ಟೆ ಜೀಪ್ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರ ಜತೆ ಸಭೆ ನಡೆಸಲಾಯಿತು. ಈ ಸಂದರ್ಭ ಮಾಂದಲ್‌ಪಟ್ಟಿ ಜೀಪ್ ಸಫಾರಿಗೆ ಪ್ರವಾಸಿಗರಿಂದ ರೂ.೨೫೦೦ ಮಾತ್ರ ಪಡೆದುಕೊಳ್ಳುವಂತೆ ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.

೨,೫೦೦ ನಿಗದಿ ಕುರಿತು ಕೆಲವು ಬೆರಳೆಣಿಕೆ ಚಾಲಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸಭೆಯಲ್ಲಿ ತೀರ್ಮಾನಿಸಿದಂತೆ ನಿಯಮ ಪಾಲನೆ ಮಾಡದಿದ್ದಲ್ಲಿ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಜತೆಗೆ ಸಂಘದಿಂದ ತೆಗೆದು ಹಾಕಲಾಗುವುದು ಎಂದು ವಿವವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಜೀಪ್ ಚಾಲಕರ, ಮಾಲೀಕರ ಸಂಘದ ಉಪಾಧ್ಯಕ್ಷ ವಿನೋದ್, ನಂದಿಮೊಟ್ಟೆ ಜೀಪ್ ಚಾಲಕರ, ಮಾಲೀಕರ ಸಂಘದ ಉಪಾಧ್ಯಕ್ಷ ಉಮೇಶ್, ಪ್ರಮುಖರಾದ ಹರೀಶ್, ದರ್ಶನ್, ಜಾನ್ಸನ್, ಉಪಸ್ಥಿತದ್ದರು.

What's Your Reaction?

Like Like 2
Dislike Dislike 0
Love Love 3
Funny Funny 0
Angry Angry 0
Sad Sad 1
Wow Wow 0