ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ: ಜು. 11ರಂದು ಬೈಲಕುಪ್ಪೆಯ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಆಡಿಷನ್
admincoorgdaily

ಮಡಿಕೇರಿ: ಕೊಡಗು ಸೇರಿ ಸುತ್ತಲಿನ ಜಿಲ್ಲೆಗಳ ಗ್ರಾಮೀಣ ರಂಗಭೂಮಿ ಕಲಾವಿದರಿಗೆ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಸಲು ರೆಮ್ಸೆಸ್ ಮೋಷನ್ ಪಿಕ್ಚರ್ಸ್ ಮುಂದಾಗಿದೆ. ಜು. 11ರಂದು ಬೈಲಕುಪ್ಪೆಯ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮುಕ್ತ ಆಡಿಷನ್ ನಡೆಯಲಿದೆ ಎಂದು ನಿರ್ದೇಶಕ ರೋಹಾನ್ ತಿಳಿಸಿದ್ದಾರೆ.
ಪಟ್ಟಣಕ್ಕೆ ಸೀಮಿತವಾಗಿರುವ ಚಿತ್ರರಂಗದ ಅವಕಾಶವನ್ನು ಹಳ್ಳಿಯ ಪ್ರತಿಭೆಗಳಿಗೂ ತಲುಪಿಸುವ ಪ್ರಯತ್ನ ಇದು. ನಟನೆಗೆ ಆಸಕ್ತಿಯಿರುವ ಎಲ್ಲ ವಯೋಮಾನದವರು ಬರಬಹುದು ಎಂದರು. ಮಾಹಿತಿಗೆ: 7760605520. ಸಂಭಾಷಣೆಕಾರ ಯೋಗಿ ಹೊನ್ನಾವರ, ಸಹಾಯಕ ನಿರ್ದೇಶಕ ಪಿಂಟು ಕುಮಾರ್ ಠಾಕೂರ್ ಇದ್ದರು.