ಎ. ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಒತ್ತಾಯ

Jun 1, 2026 - 20:18
 0  180
ಎ. ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು  ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸೇವಾದಳ  ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಒತ್ತಾಯ

ಗೋಣಿಕೊಪ್ಪ : ಎಲ್ಲಾ ಜಾತಿ ಜನಾಂಗವನ್ನು, ಧರ್ಮಿಯರನ್ನು ಸಮಾನವಾಗಿ ಕಾಣುವ, ಶಾಸಕರಾಗಿ ಮೂರು ವರ್ಷದಲ್ಲಿ ದಿನನಿತ್ಯ ಸರಾಸರಿ ಸುಮಾರು 18 ಗಂಟೆಗೂ ಅಧಿಕ ಕಾಲ ಸೇವೆ ಸಲ್ಲಿಸುತ್ತಿರುವ,ಜನರ ಒಡನಾಟ, ಭೇಟಿಗೆ ಲಭ್ಯ ಇರುವ ಮೂಲಕ ಉತ್ತಮ ಆಡಳಿತಗಾರ ಎಂದು ಜನ ಮನ್ನಣೆ ಪಡೆದಿರುವ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ನಿಯೋಜಿತ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ದ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಪಿ.ಜಿ ರಾಜಶೇಖರ್ ಸೇರಿದಂತೆ ಸರ್ವ ಸದಸ್ಯರು ಒತ್ತಾಯಿಸಿದ್ದಾರೆ.

 ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುವತ್ತಿರುವ ಪೊನ್ನಣ್ಣ ಅವರು ಜನ ಸಾಮಾನ್ಯರಿಗೆ ಕೈಗೆ ಏಟುಕುವ, ತಮ್ಮ ಸರಳತೆ,ತಾಳ್ಮೆ, ಉತ್ತಮ ನಡವಳಿಕೆ ಮೂಲಕ ಜನ ಮನ ಹತ್ತಿರವಾಗಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನೂತನ ಸರಕಾರ, ಶಾಸಕ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರ ಪಾಂಡಿತ್ಯ,ಜ್ಞಾನ,ದೂರದೃಷ್ಟಿ, ಚಿಂತನೆಗಳನ್ನು ಬಳಸಿಕೊಂಡು ಉತ್ತಮ ಆಡಳಿತ ನಡೆಸಲು ಸಾಧ್ಯವಾಗಲಿದೆ ಎಂದು ಸದಸ್ಯರುಗಳು ಅಭಿಪ್ರಾಯ ಪಟ್ಟಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0