ಪೊನ್ನಂಪೇಟೆ:ಕೊಟ್ಟೂರು ಗ್ರಾಮದ ಮಹಾದೇವ ದೇವಸ್ಥಾನಕ್ಕೆ ಶಾಸಕ ಎ.ಎಸ್ ಪೊನ್ನಣ್ಣ ಭೇಟಿ
ಪೊನ್ನಂಪೇಟೆ: ತಾಲೂಕಿನ ಕೊಟ್ಟೂರು ಗ್ರಾಮದ ಪ್ರಸಿದ್ಧ ಮಹಾದೇವ ದೇವಸ್ಥಾನಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರುಭೇಟಿ ನೀಡಿದರು.
ಶ್ರೀ ಮಹದೇವ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ, ನೂತನವಾಗಿ ನಿರ್ಮಾಣವಾಗಿರುವ ದೇವಸ್ಥಾನದ ಕಮಾನ್ ವನ್ನು ಶಾಸಕರು ಲೋಕಾರ್ಪಣೆಗೈದರು. ಕಾಮಗಾರಿಗೆ ಮಾನ್ಯ ಶಾಸಕರು ₹2.5 ಲಕ್ಷ ಅನುದಾನವನ್ನು ಒದಗಿಸಿದ್ದಾರೆ. ಬಳಿಕ ಅಲ್ಲಿನ ಕಾಲೋನಿಗೆ ಭೇಟಿ ನೀಡಿದರು.
ಕಾಲೋನಿಯ ನಿವಾಸಿಗಳನ್ನು ಭೇಟಿ ಮಾಡಿದ ಶಾಸಕರು, ಅವರ ಸಮಸ್ಯೆಗಳನ್ನು ಆಲಿಸಿದರಲ್ಲದೆ ಅವರ ಅವಾಲುಗಳನ್ನು ಸ್ವೀಕರಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಿರುಗೂರು ವಲಯ ಅಧ್ಯಕ್ಷರು ಚೆಪ್ಪುಡೀರ ಬೋಪಣ್ಣ, ಕೊಳ್ಳಿಮಾಡ ಪೊನ್ನಪ್ಪ, ಕಟ್ಟಿಮಡ ಕಿಶೂ, ಹಿರಿಯರಾದ ಪೆಮ್ಮಂಡ ಪೊನ್ನಪ್ಪ, ಜಿಮಿ ಅಣ್ಣಯ್ಯ, ಮುಕಳೇರ ಕುಶಾಲಪ್ಪ, ಕೆ ಕೆ ರವಿ, ಪಿ ಕೆ ಗಿರೀಶ್, ಪಕ್ಷದ ಮುಖಂಡರು, ಹಾಗೂ ಸ್ಥಳೀಯರು ಪ್ರಮುಖರು ಉಪಸ್ಥಿತರಿದ್ದರು.