ಪ್ರಗತಿ ಶೀಲ್ಡ್ U-15 – ಸೀಸನ್ 1 ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್‌ಶಿಪ್; ಆರ್ಮಿ‌ ಕ್ರಿಕೆಟ್ ಕ್ಲಬ್& ಅಕಾಡೆಮಿ ಚಾಂಪಿಯನ್

Apr 28, 2026 - 11:04
 0  83
ಪ್ರಗತಿ ಶೀಲ್ಡ್ U-15 – ಸೀಸನ್ 1 ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್‌ಶಿಪ್; ಆರ್ಮಿ‌ ಕ್ರಿಕೆಟ್ ಕ್ಲಬ್& ಅಕಾಡೆಮಿ ಚಾಂಪಿಯನ್

ವಿರಾಜಪೇಟೆ: ಪ್ರಗತಿ ಶಾಲೆ, ವಿರಾಜಪೇಟೆ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಶೀಲ್ಡ್ ಅಂಡರ್-15 ಸೀಸನ್ 1 ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್‌‌ ಶಿಪ್ ಗೆ ವರ್ಣ ರಂಜಿತ ತೆರೆ ಬಿದ್ದಿದೆ. ಕರ್ನಾಟಕ ಸೇರಿದಂತೆ ತಮಿಳುನಾಡಿನ ಯುವ ಕ್ರಿಕೆಟ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಆರ್ಮಿ ಕ್ರಿಕೆಟ್ ಕ್ಲಬ್ & ಅಕಾಡೆಮಿ, ತಮಿಳುನಾಡು ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಹೆರಿಟೇಜ್ ಕ್ರಿಕೆಟ್ ಅಕಾಡೆಮಿ, ಮೈಸೂರು ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಪಂದ್ಯಾವಳಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗುರುಪ್ರಘಲಾಥನ್ ಆರ್ಮಿ ಕ್ರಿಕೆಟ್ ಅಕಾಡೆಮಿ, ತಮಿಳುನಾಡು ಪಡೆದುಕೊಂಡರು.

 ಬೆಸ್ಟ್ ಬ್ಯಾಟ್ಸ್‌ಮನ್, ಆಕಾಶ್ ಹೆರಿಟೇಜ್ ಕ್ರಿಕೆಟ್ ಕ್ಲಬ್, ಮೈಸೂರು, ಬೆಸ್ಟ್ ಬೌಲರ್, ಕುವಂ ಆರ್ ಕೀರ್ತಿ ಹೆರಿಟೇಜ್ ಕ್ರಿಕೆಟ್ ಅಕಾಡೆಮಿ, ಮೈಸೂರು,ಬೆಸ್ಟ್ ಫೀಲ್ಡರ್ ಆಕಾಶ್ ಹೆರಿಟೇಜ್ ಕ್ರಿಕೆಟ್ ಅಕಾಡೆಮಿ, ಮೈಸೂರು, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಸುಜಿತ್ ಆರ್ಮಿ ಕ್ರಿಕೆಟ್ ಅಕಾಡೆಮಿ, ತಮಿಳುನಾಡು ಪಡೆದುಕೊಂಡರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0