ಎಜಿಬಿಎ ಅಗ್ರಿಟೆಕ್ ಇನ್ನೋವೇಶನ್ ಸರಣಿ, ಜ್ಯೂರಿ ಸುತ್ತಿನ" ವಿಶಿಷ್ಟ ತೀರ್ಪುಗಾರ ಸದಸ್ಯರಾಗಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಯ್ಕೆ
admincoorgdaily
ಮಡಿಕೇರಿ:ಭಾರತ ಸರ್ಕಾರ, ನವದೆಹಲಿ ಮತ್ತು ಸ್ವಿಸ್ಸೆನ್ಸ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಹಭಾಗಿತ್ವದ 16ನೇ ಆವೃತ್ತಿಯ ವಾರ್ಷಿಕ ಏಜಿಸ್ ಗ್ರಹಾಂ ಬೆಲ್ ಪ್ರಶಸ್ತಿಗಳ ನಾವೀನ್ಯತೆಗಳನ್ನು ಮೌಲ್ಯಮಾಪನಕ್ಕಾಗಿ "ಎಜಿಬಿಎ ಅಗ್ರಿಟೆಕ್ ಇನ್ನೋವೇಶನ್ ಸರಣಿ, ಜ್ಯೂರಿ ಸುತ್ತಿನ" ವಿಶಿಷ್ಟ ತೀರ್ಪುಗಾರ ಸದಸ್ಯರಾಗಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರನ್ನು ಆಯ್ಕೆಯಾಗಿದ್ದಾರೆ.
ಎಜಿಬಿಎ ಅಗ್ರಿಟೆಕ್ ಇನ್ನೋವೇಶನ್ ಸರಣಿಯು 16 ನೇ ಆವೃತ್ತಿಯ ಏಜಿಸ್ ಗ್ರಹಾಂ ಬೆಲ್ ಪ್ರಶಸ್ತಿಗಳ ನಾವೀನ್ಯತೆ ಜ್ಯೂರಿ ಪ್ರಸ್ತುತಿಗಳ ಪ್ರಮುಖ ಭಾಗವಾಗಿದೆ. ಏಜಿಸ್ ಸ್ಕೂಲ್ ಆಫ್ ಬ್ಯುಸಿನೆಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ ಮತ್ತು ಟೆಲಿಕಮ್ಯುನಿಕೇಶನ್‌ನ ತಾಂತ್ರಿಕ ನಾವೀನ್ಯತೆ ಮುಂದುವರಿಸುವ ಬದ್ಧತೆಯ ಈ ಉಪಕ್ರಮವನ್ನು ಅಸೆಸ್‌ಫೈ ಮತ್ತು ಮ್ಯೂನಿಕ್ಯಾಂಪಸ್ ಜೊತೆಗೆ ಮೈಟಿಯು ಏಜಿಬಿಎ ಅನ್ನು ಬೆಂಬಲಿಸುತ್ತದೆ. ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರನ್ನು 16ನೇ ಆವೃತ್ತಿಯ ವಾರ್ಷಿಕ ಏಜಿಸ್ ಗ್ರಹಾಂ ಬೆಲ್ ಪ್ರಶಸ್ತಿಗಳ ನಾವೀನ್ಯತೆಗಳ ಮೌಲ್ಯಮಾಪನಕ್ಕಾಗಿ ವಿಶಿಷ್ಟ ತೀರ್ಪುಗಾರ ಸದಸ್ಯರಾಗಿ ಆಯ್ಕೆ ಮಾಡಿರುವುದು ಹರ್ಷದಾಯಕ ವಿಚಾರವಾಗಿದೆ.