ಸಿದ್ದಾಪುರದಲ್ಲಿ ಕ್ರೈಸ್ತ ಬಾಂಧವರಿಂದ ಪ್ರತಿಭಟನೆ

ಸಿದ್ದಾಪುರದಲ್ಲಿ  ಕ್ರೈಸ್ತ ಬಾಂಧವರಿಂದ ಪ್ರತಿಭಟನೆ

ಸಿದ್ದಾಪುರ:ಕೇರಳ ರಾಜ್ಯದ ಇಬ್ಬರು ಕ್ರೈಸ್ತ ಕನ್ಯಾಸ್ತ್ರೀಯರನ್ನು ಸುಳ್ಳು ಮೊಕದ್ದಮೆ ಹೂಡಿ ಛತ್ತೀಸ್‌ಗಢ ರಾಜ್ಯದಲ್ಲಿ ಬಂಧಿಸಿರುವ ಕ್ರಮವನ್ನು ಖಂಡಿಸಿ ಭಾನುವಾರ ಸಂತ ಜೋಸೆಫರ ದೇವಾಲಯದ ನೇತೃತ್ವದಲ್ಲಿ ಕ್ರೈಸ್ತ ಭಾಂದವರು ಮೌನ ಪ್ರತಿಭಟನೆ ನಡೆಸಿದರು. ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದ ನಂತರ ಘಟನೆಗೆ ಖಂಡನೆ ವ್ಯಕ್ತಪಡಿಸಿದರು.

 ಪ್ರಮುಖರು ಮಾತನಾಡಿ ಕೇರಳ ರಾಜ್ಯದ ಇಬ್ಬರು ಕನ್ಯಾಸ್ತ್ರೀಯರನ್ನು ತಕ್ಷಣ ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕು ಮತ್ತು ಬಂಧಿಸಲು ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಗುರುಗಳಾದ ಮೈಕಲ್ ಮರಿ, ಸಿಸ್ಟರ್ ಮರಿಜೋರಿ,ಜಾನ್ಸನ್, ಜೋಸಿ,ಸನಿಲ್, ಜೋಸೆಫ್ ಶ್ಯಾಮ್, ಕುರಿಯನ್, ಟಿನಿ, ತೆರೇಸಾ,ಡೆನ್ನಿ, ಡೆನ್ನಿ ಕೊರಿಯ, ಸೈನಿಕೋರಿಯಾ, ತೋಮಸ್ , ಹಾಗೂ ಸಂತ ಜೋಸೆಫರ ದೇವಾಲಯದ ಎಲ್ಲಾ ಕ್ರೈಸ್ತ ಭಕ್ತಾದಿಗಳು ಹಾಜರಿದ್ದರು.