ರಾಜ್ಯೋತ್ಸವ ಪ್ರಶಸ್ತಿ:ಕೊಡಗು ಜಿಲ್ಲೆಯ ಸಾಹಿತಿಗಳನ್ನು ಪರಿಗಣಿಸುವಂತೆ ಮನವಿ

ರಾಜ್ಯೋತ್ಸವ ಪ್ರಶಸ್ತಿ:ಕೊಡಗು ಜಿಲ್ಲೆಯ ಸಾಹಿತಿಗಳನ್ನು ಪರಿಗಣಿಸುವಂತೆ ಮನವಿ

ಮಡಿಕೇರಿ:ಕೊಡಗು ಜಿಲ್ಲೆಯ ಸಾಹಿತಿಗಳನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಂತೆ ಒತ್ತಾಯಿಸಿ ಕನ್ನಡ ಸಿರಿ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್ ಮುಖಾಂತರ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ‌ಮಾಡಿದವರ ಸಂಖ್ಯೆ ಸಾಕಷ್ಟಿದ್ದರೂ ಅಗತ್ಯ ಪರಿಗಣನೆ ಸಿಗುತಿಲ್ಲ .ಈ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುವಾಗ ಜಿಲ್ಲೆಯ ಅರ್ಹ ಸಾಹಿತಿಗಳನ್ನು ಗುರುತಿಸಿ ಗೌರವಿಸುವಂತೆ ಕನ್ನಡ ಸಿರಿ ಸ್ನೇಹ ಬಳಗ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ವೆಂಕಟ್ ರಾಜ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನೇಕ‌ ಸಾಹಿತಿಗಳು ಪ್ರಚಾರ ಬಯಸದೆ ಸಾಹಿತಿಕ ಕೃಷಿಯಲ್ಲಿ ತೊಡಗಿದ್ದಾರೆ. ಕಥೆ,ಕಾದಂಬರಿ ,ಕಾವ್ಯ ರಚನೆ ಸೇರಿದಂತೆ ಅನುವಾದ ಸಾಹಿತ್ಯದ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸಿ ಅನೇಕ ಪುಸ್ತಕಗಳನ್ನು ರಚಿಸಿದ ಸಾಹಿತಿಗಳನ್ನು ಪ್ರಶಸ್ತಿಗಳನ್ನು ನೀಡುವಾಗ ಪರಿಗಣಿಸಬೇಕೆಂದು ಅವರು ಹೇಳಿದರು.

ಇತೀಚೆಗೆ ಅತ್ಯುನ್ನತ ಗೌರವವಾದ ಬೂಕರ್ ಪ್ರಶಸ್ತಿಯನ್ನು ಜಿಲ್ಲೆಯವರೇ ಆದ ದೀಪ ಬಸ್ತಿ ತನ್ನದಾಗಿಸಿರುವುದು ಕನ್ನಡ ಭಾಷಾ ಪ್ರೀಯರಿಗೆ ಸಿಕ್ಕ ಸನ್ಮಾನವಾಗಿದೆ. ಹಿರಿಯ ಸಾಹಿತಿಗಳನ್ನು ಗುರುತಿಸಿ ಗೌರವಿಸುವುದು ಕನ್ನಡ ಸಿರಿ ಬಳಗದ ಬೇಡಿಕೆಯಾಗಿದೆ ಎಂದು ಅವರು ಅಭಿಪ್ರಯಪಟ್ಟರು. ಕನ್ನಡ ಸಿರಿ ಬಳಗದ ಪಧಾದಿಕಾರಿಗಳಾದ ಧನಂಜಯ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ , ಐಗೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ದಿನೇಶ್, ಪತ್ರಕರ್ತ ಗುರುದರ್ಶನ್ ಉಪಸ್ಥಿತರಿದ್ದರು.