ದಂಡ ಶುಲ್ಕವನ್ನು ಮನ್ನಾ ಮಾಡಲು ಮನವಿ

Jul 25, 2025 - 18:51
 0  143
ದಂಡ ಶುಲ್ಕವನ್ನು ಮನ್ನಾ ಮಾಡಲು ಮನವಿ

ಮೈಸೂರು: ದಂಡದ ಶುಲ್ಕವನ್ನು ಮನ್ನಾ ಮಾಡಬೇಕೆಂದು ತಂಬಾಕು ಮಂಡಳಿ ಮೈಸೂರಿನ ಪ್ರಾದೇಶಿಕ ವಲಯ ಕಚೇರಿಯಲ್ಲಿ ತಂಬಾಕು ಮಂಡಳಿಗೆ ಕಾರ್ಯಕಾರಿ ನಿರ್ದೇಶಕರಾದ ಶ್ರೀಮತಿ ವಿಶ್ವ ಶ್ರೀ ಐಎಎಸ್ ರವರು, ತಂಬಾಕು ಮಂಡಳಿ ನಿರ್ದೇಶಕರು ಭಾರತ ಸರ್ಕಾರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರ್ ಕುಮಾರ್ ರವರು ಮಾತನಾಡಿ ಈಗಾಗಲೇ ಶೇಕಡ 25 ಮತ್ತು 50ರಷ್ಟು ಪ್ರತಿಶತ ತಂಬಾಕು ಮಾರಾಟ ಮಾಡಿದ ರೈತರ ದಂಡದ ಹಣವನ್ನು ಮನ್ನಾ ಮಾಡಿರುವುದು ಸ್ವಾಗತರ್ಹ ಕ್ರಮವಾಗಿದೆ. ಜೊತೆಗೆ ಕರ್ನಾಟಕದಲ್ಲಿ ಶೇಕಡ 70ರಷ್ಟು ರೈತರು ಸಣ್ಣ ಹಿಡಿವಳಿದಾರರಾಗಿದ್ದು ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಿ ರೈತರು ತಂಬಾಕು ಮಾರಾಟ ಮಾಡಲು ಸಾಧ್ಯವಾಗಿರುವುದಿಲ್ಲ. ಇದರೊಂದಿಗೆ ಕೆಳದರ್ಜೆ ತಂಬಾಕು ಉತ್ಪಾದನೆ ಆಗಿರುವ ಕಾರಣ ಸದರಿ ತಂಬಾಕು ಮಾರಾಟ ಮಾಡಲಾಗುತ್ತಿಲ್ಲ ಹಾಗೂ ಖರಿದಿದಾರರು ಸಹ ಮುಂದೆ ಬರುತ್ತಿಲ್ಲ. ಈ ಕಾರಣದಿಂದ ತಂಬಾಕು ಮಾರಾಟ ಮಾಡಲಾಗದೆ ರೈತರಿಗೆ ದಂಡದ ಶುಲ್ಕವನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಹಾಲಿ ವ್ಯವಸಾಯದ ಸಮಯವಾದ್ದರಿಂದ ದುಬಾರಿ ತಂಡದ ಶುಲ್ಕ ಹೊಂದಿಸಲು ರೈತರು ಅಸಮರ್ಥ ರಾಗಿದ್ದಾರೆ. ಆದ್ದರಿಂದ ಈ ಬಾರಿಯ ದಂಡದ ಶುಲ್ಕವನ್ನು ಮನ್ನಾ ಮಾಡಿ ರೈತರ ಪರವಾನಿಗೆ ನವೀಕರಿಸಲು ಅನುಕೂಲ ಮಾಡಿಕೊಡಬೇಕೆಂದು ಹಾಗೂ ಈ ಹಿಂದಿನ ಮೂರು ವರ್ಷಗಳ ಗಳಿಂದ ಡ್ರಾಪ್ ಆಗಿರುವ ಲೈಸೆನ್ಸ್ ಗಳನ್ನು ನವೀಕರಿಸಿ ಕೊಡಬೇಕೆಂದು ಇಂದು ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಒಳ್ಳೆಯ ಉತ್ಕೃಷ್ಟ ತಂಬಾಕುಗಳನ್ನು ಬೆಳೆದು ಇನ್ನಷ್ಟು ಕ್ಯೂರಿಂಗ್ ಆಗಲಿದ್ದು ತಂಬಾಕು ಬ್ಲಾಕ್ ಆಗದ ರೀತಿಯಲ್ಲಿ ಮಂಡಳಿ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳಲಾಯಿತು.

 ಈ ಸಂದರ್ಭದಲ್ಲಿ ಕರ್ನಾಟಕ ತಂಬಾಕು ಮಂಡಳಿ ಹರಾಜು ನಿರ್ದೇಶಕರಾದ ಶ್ರೀನಿವಾಸ್ ರವರು, ತಂಬಾಕು ಮಂಡಳಿ ನಿರ್ದೇಶಕರಾದ ವಿಕ್ರಂ ರಾಜೇಗೌಡ ರವರು, ಆರ್‌ಎಂಒ ವೇಣುಗೋಪಾಲ್ ರವರು, ತಂಬಾಕು ಬೆಳೆಗಾರರ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಹಾಗೂ ಮೋದೂರು ಶಿವಣ್ಣ ಗೌರವಾಧ್ಯಕ್ಷರಾದ ಉಂಡವಾಡಿ ಚಂದ್ರೇಗೌಡ, ರೈತ ಸಂಘದ ಮುಖಂಡರಾದ ಸತೀಶ್ ರವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0