ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಟಿ ಸಡಗರ - ಕಕ್ಕಡ ಖಾದ್ಯಗಳ ಘಮಲು

Aug 5, 2026 - 17:17
 0  45
ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಟಿ ಸಡಗರ - ಕಕ್ಕಡ ಖಾದ್ಯಗಳ ಘಮಲು

ಮಡಿಕೇರಿ: ಹಳೇ ಆಚರಣೆಗಳು, ಸಂಪ್ರದಾಯಗಳು ಕೂಡ ಹಳೇ ತಲೆಮಾರಿನ ಜನರಂತೆ ಆಧುನಿಕ ಸಮಾಜದಲ್ಲಿ ನಿಲ೯ಕ್ಷಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಜೀವಿಗಳ ಪ್ರಾಮುಖ್ಯತೆ ಬಗ್ಗೆ ಕಿರಿಯರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನಗಳು ಆಗಬೇಕೆಂದು ಹಿರಿಯ ಸಾಹಿತಿ ಬಿ. ಆರ್. ಜೋಯಪ್ಪ ಕರೆ ನೀಡಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಕ್ಕಡ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಆಟಿ ಸಡಗರ ಕಾಯ೯ಕ್ರಮದಲ್ಲಿ ಕಕ್ಕಡದ ಮಹತ್ವ ವಿಚಾರವಾಗಿ ಮಾತನಾಡಿದ ಜೋಯಪ್ಪ, ಪ್ರತೀ ಹಬ್ಬ ಮತ್ತು ಆಚರಣೆಗೂ ಮಹತ್ವವಿದೆ. ಹಿರಿಯರು ಅಂದಿನ ಕಾಲದಲ್ಲಿ ಸುಮ್ಮನೆ ಇಂಥ ಆಚರಣೆಗಳನ್ನು ಜಾರಿಗೆ ತರಲಿಲ್ಲ. ಬದಲಿಗೆ, ಆರೋಗ್ಯವಧ೯ಕವಾದ ಅಂಶಗಳನ್ನೂ ಆಚರಣೆಗಳಲ್ಲಿ ಸೇಪ೯ಡೆ ಮಾಡಿಕೊಳ್ಳಲಾಗಿತ್ತು ಎಂದರು. ಕಕ್ಕಡ ತಿಂಗಳಿನ್ಲಿ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಕಕ್ಕಡ ಮಾಸವು ಅಶುಭ ಎಂಬ ನಂಬಿಕೆಯಿದೆ. ಆದರೆ, ಕಕ್ಕಡ ಮಾಸವು ಮಳೆ ತೀವ್ರ ಹೆಚ್ಚಾಗಿರುವ ದಿನಗಳಲ್ಲಿಯೇ ಬರುವ ಕಾರಣ, ಹಿಂದಿನ ಕಾಲದಲ್ಲಿ ಇಂಥ ದಿನಗಳಲ್ಲಿ ಸಮಾರಂಭಗಳನ್ನು ಆಯೋಜಿಸಲು ಕಷ್ಟ ಎಂಬ ಕಾರಣದಿಂದ ಮಾತ್ರವೇ ಕಕ್ಕಡ ಮಾಸದಲ್ಲಿ ಸಮಾರಂಭಗಳನ್ನು ಮಾಡುತ್ತಿರಲಿಲ್ಲ. ವೈಜ್ಞಾನಿಕ ಕಾರಣವೂ ಇದರ ಹಿಂದಿತ್ತು ಎಂದೂ ಜೋಯಪ್ಪ ವಿಶ್ಲೇಷಿಸಿದರು.

50 ವಷ೯ಗಳ ಹಿಂದಿನ ಪರಿಸರದಂತೆಯೇ ಅಂದಿನ ಆಚರಣೆಗಳೂ ಇಂದಿನ ಕಾಲದಲ್ಲಿ ಮರೆಯಾಗುತ್ತಿದೆ. ಆಗಿದ್ದ ಭತ್ತದ ಗದ್ದೆಗಳ ವೈಭವ ಕೂಡ ಕಂಡುಬರದಾಗಿದೆ. ಫಸಲು ಕೂಡ ಆಗಿನಂತೆ ಇಲ್ಲ. ಏಲಕ್ಕಿ, ಕರಿಮೆಣಸು, ಕಿತ್ತಳೆ, ಭತ್ತ ಸೇರಿದಂತೆ ದೈನಂದಿನ ಜೀವನಕ್ಕೆ ಯಾವುದು ಅಗತ್ಯವೋ ಅಂಥ ಕೖಷಿಯಿಂದ ವಿಮುಖರಾಗುತ್ತಿರುವುದು ಭವಿಷ್ಯದ ದೖಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದೂ ಬಿ.ಆರ್. ಜೋಯಪ್ಪ ಎಚ್ಚರಿಸಿದರು.

ಹಿರಿಯರು ಮನೆಯಲ್ಲಿದ್ದರೇ ಅಂಥ ಮನೆಗೆ ಗೌರವವಾಗುತ್ತದೆ. ಹಿರಿಯ ಮಾಗ೯ದಶ೯ನ ಇದ್ದರೆ ಮನೆಮಂದಿ ಸಂತೋಷದಿಂದ, ನೆಮ್ಮದಿಯಿಂದ ಜೀವಿಸಲು ಸಾಧ್ಯವಿದೆ. ಹಿರಿಯ ಜೀವಿಗಳ ಬಗ್ಗೆ ಅಲಕ್ಷ್ಯ ತೋರದೇ ಹಿರಿಯರನ್ನು ಗೌರವಿಸಿ ಎಂದೂ ಜೋಯಪ್ಪ ಕರೆ ನೀಡಿದರು.

ರೋಟರಿ ಜಿಲ್ಲೆ 3181 ನ ಗವನ೯ರ್ ಸತೀಶ್ ಬೊಳಾರ್ ಆಟಿ ಸಡಗರಕ್ಕೆ ಆಟಿ ಸೊಪ್ಪಿನ ಪಾಸ ಸೇವಿಸಿ ಚಾಲನೆ ನೀಡಿದರು. ಈ ಸಂದಭ೯ ಮಾತನಾಡಿದ ಸತೀಶ್ ಬೊಳಾರ್, ಪ್ರಾಚೀನ ದಿನಗಳ ಪ್ರತೀಯೊಂದು ಆಚರಣೆಗೂ ವೈಜ್ಞಾನಿಕ ಕಾರಣಗಳಿದ್ದವು ಮನೆ ಮುಂದೆ ತುಳಸಿ ಕಟ್ಟೆ ನಿಮಾ೯ಣ, ಸಗಣೆ ಸಾರಿಸುವಿಕೆಯಿಂದ ನೈಮ್ಯಲ್ಯ ಕಾಪಾಡುವಿಕೆ, ದೀಪ ಬೆಳಗಿಸುವ ಮೂಲಕ ಉತ್ತಮ ಎನಜಿ೯ಯ ಸಂಪಾದನೆ , ಶಂಖನಾದದ ಮಹತ್ವ ಮುಂತಾದ ಕಾರಣಗಳು ಇದ್ದವು. ಈಗ ನಗರೀಕರಣ ಹೆಚ್ಚಾಗುತ್ತಿರುವಂತೆಯೇ ಹಲವಷ್ಟು ಆಚರಣೆಗಳನ್ನು ಮರೆಯುತ್ತಿದ್ದೇವೆ. ಹಳೇ ಕಾಲದ ಊಟ, ಖಾದ್ಯಗಳು ಕೂಡ ಮರೆಯಾಗುತ್ತಿದೆ. ಇಂಥ ಸಂದಭ೯ ಆಟಿಯಂಥ ಪ್ರಾಚೀನ ಆಚರಣೆಗಳು ನಮಗೆ ಸಂಪ್ರದಾಯಗಳಲ್ಲಿನ ಮಹತ್ವವನ್ನು ತಿಳಿಸುವಲ್ಲಿ ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಆಧುನಿಕ ಸಮಾಜದಲ್ಲಿ ಎಲ್ಲಾ ವಸ್ತುಗಳ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಜೀವನ ಮೌಲ್ಯ ಮಾತ್ರ ಇಳಿಮುಖವಾಗುತ್ತಿದೆ ಎಂದೂ ಸತೀಶ್ ಬೊಳಾರ್ ವಿಷಾಧಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಸ್ವಾಗತಿಸಿ, ಕಾಯ೯ದಶಿ೯ ಡಾ.ಜಿ.ಡಿ. ಚೇತನ್ ವಂದಿಸಿದ ಕಾಯ೯ಕ್ರಮದಲ್ಲಿ ವಲಯ 6 ರ ಸಹಯಕ ಗವನ೯ರ್ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿಗಳಾದ ಪೊನ್ನಚ್ಚನ ಮಧುಸೂದನ್, ವಸಂತ್ ಕುಮಾರ್, ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ರಿತೇಶ್ ಬಾಳಿಗ ಉಪಸ್ತಿತರಿದ್ದರು. ಮಂಗಳೂರಿನ ಗಾಯಕಿ ಅನುಷ ಬೊಳಾರ್ ಅವರಿಂದ ಜಾನಪದ ಹಾಡು ಕೇಳುಗರ ಮನಸೆಳೆಯಿತು. ರೋಟರಿ ಜಿಲ್ಲೆಯ ಕ್ಲಬ್ ವಿಸ್ತರಣಾ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ನಿರೂಪಿಸಿದರು. ಕಟ್ಟೆಮನೆ ಸೋನಜಿತ್ ಅತಿಥಿ ಪರಿಚಯ ಮಾಡಿದರು.

ಕಕ್ಕಡ ವಿಶೇಷ ಖಾದ್ಯಗಳ ಘಮಲು!

ನೀರ್ ದೋಸೆ, ಕ್ರಾಬ್ ಕರಿ,ನೂಪುಟ್ಟು, ನಾಟಿ ಕೋಳಿ ಸಾರು, ಚಿಕನ್ ಡ್ರೈ ಫ್ರೈ,ಕಣಲೆ ಪಲ್ಯ, ಕಾಡು ಮಾವಿನ ಹಣ್ಣಿನ ಸಾರು, ಹಲಸಿನ ಹಣ್ಣಿನ ಪಾಯಸ, ಕಾಯಿ ಹಾಲು ಬೆಲ್ಲದ ಕಾಫಿ, ಅವಲಕ್ಕಿ ಹುರುಳಿ ಚಟ್ನಿ ಕೆಸ ಸಾರು, ಕೂವಲೇ ಹಿಟ್ಟು,ಆಟಿ ಪಾಯಸ ಆಟಿ ಹಲ್ವಾ, ಪತ್ರೊಡೆ ಚರ್ಮೆ ಸೊಪ್ಪು ಪಲ್ಯ ಕಹಿ ಹುಳಿ ಚಟ್ಿ ಹೀಗೆ ಬಾಯಲ್ಲಿ ನೀರೂರಿಸುವ ಹತ್ತಾರು ವೈವಿಧ್ಯಮಯ ಖಾದ್ಯಗಳನ್ನು ರೋಟರಿ ಮಿಸ್ಟಿ ಹಿಲ್ಸ್ ನ ಮಹಿಳೆಯರು ತಯಾರಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0