ರೋಟರಿ ಮಿಸ್ಟಿ ಹಿಲ್ಸ್ ನಿಂದ ಯಶಸ್ವಿ 12 ನೇ ವಷ೯ದ ಮಕ್ಕಳ ದಸರಾ : ಮಕ್ಕಳಿಂದ ಮಂಟಪ ಸ್ಪಧೆ೯ಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ

ರೋಟರಿ ಮಿಸ್ಟಿ ಹಿಲ್ಸ್ ನಿಂದ ಯಶಸ್ವಿ 12 ನೇ ವಷ೯ದ ಮಕ್ಕಳ ದಸರಾ : ಮಕ್ಕಳಿಂದ  ಮಂಟಪ ಸ್ಪಧೆ೯ಯಲ್ಲಿ  ಟೀಮ್ ಅಗ್ನಿಗೆ   ಪ್ರಥಮ ಬಹುಮಾನ
ಚಿತ್ರ - ಮಕ್ಕಳ ದಸರಾ- ಮಂಟಪ ಸ್ಪಧೆ೯ಯಲ್ಲಿ ಪ್ರಥಮ ಬಹುಮಾನ ಪಡೆದ ಟೀಮ್ ಅಗ್ನಿಯ ಮಂಟಪ

ಮಡಿಕೇರಿ ಸೆ.30 - ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಮಕ್ಕಳ ದಸರಾದಲ್ಲಿನ ಮಂಟಪ ನಿಮಾ೯ಣ ಸ್ಪಧೆ೯ಯಲ್ಲಿ ಕಳೆದ ವಷ೯ದ ವಿಜೇತ ತಂಡ ಟೀಮ್ ಅಗ್ನಿ ಈ ವಷ೯ವೂ ಅತ್ಯುತ್ತಮ ಪ್ರದಶ೯ನದೊಂದಿಗೆ ಪ್ರಥಮ, ಸ್ಥಾನ ಪಡೆದುಕೊಂಡಿತು. ಪಾಕ್೯ ಸೈಡ್ ಕೇಸರಿ ಮಕ್ಕಳ ಸಂಘ ದ್ವಿತೀಯ ಸ್ಥಾನ ಪಡೆದರೆ, ಕ್ರಿಯೇಟಿವ್ ಬಾಯ್ಸ್ , ತೖತೀಯ ಬಹುಮಾನ ತನ್ನದಾಗಿಸಿಕೊಂಡಿತು.

 ಚತುಥ೯ ಬಹುಮಾನವನ್ನು ಟೀಮ್ ವಾರಿಯರ್ಸ್ ಮತ್ತು ಟೀಮ್ 14 ಸಮಧಾನಕರ ಬಹುಮಾನವನ್ನು ಪಡೆದುಕೊಂಡಿತು.

 ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿತ ರೋಟರಿ ಮಿಸ್ಟಿ ಹಿಲ್ಸ್ ನ 12 ನೇ ವಷ೯ದ ಮಕ್ಕಳ ದಸರಾದ ವಿವಿಧ ಸ್ಪಧಾ೯ ವಿಭಾಗಗಳ ಸ್ಪಧೆ೯ಗಳ ಬಹುಮಾನ ವಿಜೇತರ ಮಾಹಿತಿ ಇಂತಿದೆ:

ಮಕ್ಕಳ ಸಂತೆ: ಪ್ರಥಮ ಬೊಳ್ಳಮ್ಮ ಎ.ಎ., ಬೊಳ್ಳಮ್ಮ ಹೆಚ್.ಎನ್. ಚೋಂದಮ್ಮ ಕೆ.ಕೆ. ಲಿಷಾ ದೇಚಮ್ಮ. ದ್ವಿತೀಯ ಶಿಥಲ್, ಜಸಿಕಾ, ತೖತೀಯ - ಕವಿನ್ ಎನ್.ಟಿ ಕಾವೇರಿ ಎನ್.ಎಸ್. ಚತುಥ೯ - ಲಿಪಿಕ, ಜಸ್ವಿನ್, ಮಾನ್ವಿತ್, ವೇದಿಕಾ, ಚಿರಾಗ್ , ಸಮಧಾನಕರ - ಪುಪ್ಪಿಕಾ ಪಿ.ಡಿ, ಬಿ.ಎನ್. ಜ್ಞಾನಿಕ, ತಶ್ವಿನ್ ಬಿ.ಪಿ., ಲವಿತ್ ಬಿ.ಪಿ., ಲಿಯಾನ್ ಸುಬ್ಬಯ್ಯ ಮಕ್ಕಳ ಅಂಗಡಿ ಪ್ರಥಮ - ಶಾವಿ೯ ಶ್ಲೋಕ ದ್ವಿತೀಯ - ದಿಯಾನ್, ಧಿಯಾರ ತೖತೀಯ - ಸಿಂಚನ, ಚೈತ್ರ ಚತುಥ೯ - ಹಿರಣ್, ಶಮಿತ್ ಸಮಧಾನಕರ - ಸ್ವರ , ದೀತ್ಯ ಕ್ಲೇ ಮಾಡೆಲಿಂಗ್ ಸ್ಪಧೆ೯ - ( 5ರಿಂದ 7 ನೇ ತರಗತಿ ವಿಬಾಗಃ ಪ್ರಥಮ - ಅ,ಷ೯ದ್ ಅಹಮ್ಮದ್, ದ್ವಿತೀಯ - ಸಖಿತ್, ತೖತೀಯ - ಗ್ರಹಿಥ್, ಚತುಥ್೯ -ಯಕ್ಷಿತ್, . ಸಮಧಾನಕರ -ಸಾಗರಿ . 8 ರಿಂದ 10 ನೇ ತರಗತಿ ವಿಭಾಗ - ಪ್ರಥಮ - ಹಷಿ೯ಥ್ ಪೊನ್ನಪ್ಪ, ದ್ವಿತೀಯ - ಉದ್ಯಾನ್. ತೖತೀಯ - ಪವಿ೯ನ್. ಚತುಥ೯ - ಪ್ರಧಾನ್ ಬಸಪ್ಪ ಕೆ.ಪಿ. ಸಮಧಾನಕರ -ಚಂದನ್ ಪಿ.ಆರ್. ಛದ್ಮವೇಷ ಸ್ಪಧೆ೯ - ( ಎಲ್ ಕಿಜಿ, ಯುಕೆಜಿ ವಿಭಾಗ) ಪ್ರಥಮ - ಶ್ರೇಷ್ಟ ತನಿಷ್ಟ. ದ್ವಿತೀಯ - ಜಾಗೖತಿ ತೖತೀಯ - ವೈಭವ್, ಚತುಥ೯ - ರೋಹಿತ್ ಬಿ.ವಿ. ಸಮಧಾನಕರ - ಸೖತಿ. ಒಂದರಿಂದ ನಾಲ್ಕನೇ ತರಗತಿ ವಿಭಾಗ - ಪ್ರಥಮ - ಧಿವಿನ್, ದ್ವಿತೀಯ - ಗಾನವಿ ತೖತೀಯ - ಆರುಷ್. ಚತುಥ೯ - ಓವಿಯ - ಸಮಧಾನಕರ - ಆರಾಧ್ಯ

 5 ರಿಂದ 7 ನೇ ತರಗತಿ ವಿಭಾಗ - ಪ್ರಥಮ - ವಷಿ೯ತ, ದ್ವಿತೀಯ - ಜನ್ಯಾ ಹರೀಶ್, ತೖತೀಯ - ದೖಷಿಕ ಚತುಥ೯ - ಯಶ್ವಂತ್ , ಸಮಧಾನಕರ - ರಕ್ಷಿತ ತೀಪು೯ಗಾರರಾಗಿ - ಮಲ್ಲಿಕಾ, ಸೌಮ್ಯ ನಿರಂಜನ್, ಬಾಳೆಯಡ ಸವಿತಾ ಪೂವಯ್ಯ, ಪ್ರಿಯಾ ನವೀನ್, ಸ್ವಣ೯, ನೇತ್ರಾವತಿ ಬಿ.ಎಂ., ಬಿಂದು ಹರೀಶ್, ಮಮತಾಶಾಸ್ತ್ರೀ, ಮಮತಾ ಚಿಣ್ಣಪ್ಪ. ಮಂಜುನಾಥ್, ಶ್ಲೋಕ ಆಳ್ವಾ ಶಶಿಕಲಾ, ಪಿ.ಜಿ. ಮಂಜುನಾಥ್, ಇ.ಎಲ್. ಸುರೇಶ್, ಹೆಚ್.ಪಿ. ರಘು, ಕಾಯ೯ನಿವ೯ಹಿಸಿದ್ದರು.

ಈ ಬಾರಿ ಮಕ್ಕಳ ದಸರಾಕ್ಕೆ ದಾಖಲೆಯ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ಮಳೆಯ ನಡುವೆಯೂ ಉತ್ಸಾಹ ಕಳೆದುಕೊಳ್ಳದ ಮಕ್ಕಳು , ಅತ್ಯಂತ ಸಡಗರದಿಂದಲೇ ಮಕ್ಕಳ ದಸರಾದಲ್ಲಿ ಪಾಲ್ಗೊಂಡಿದ್ದರು. ಮಕ್ಕಳ ಅಂಗಡಿಗೆ 115, ಮಕ್ಕಳ ಸಂತೆಗೆ 82, ಛದ್ನವೇಷಕ್ಕೆ 67, ಕ್ಲೇಮಾಡೆಲಿಂಗ್ ಗೆ 15 ಮತ್ತು ಮಕ್ಕಳ ಮಂಟಪಕ್ಕೆ 18 ಸ್ಪಧಿ೯ಗಳು ಪಾಲ್ಗೊಂಡಿದ್ದರು. ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದರು.

ಮಕ್ಕಳ ಮಂಟಪದ ತೀಪು೯ಗಾರಿಕೆ ಸುಮಾರು 4.30 ಗಂಟೆಗಳ ಜರುಗಿತು. ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ಹಿರಿಯ ಪತ್ರಕತ೯ ಜಿ. ಚಿದ್ವಿಲಾಸ್, ಡಾ.ಜಿ.ಡಿ. ಚೇತನ್, ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮೂಡಾ ಸದಸ್ಯೆ ಮೀನಾಜ್ ಪ್ರವೀಣ್, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಬಹುಮಾನಗಳನ್ನು ವಿತರಿಸಿದರು.