ರೋಟರಿ ವುಡ್ಸ್ ವತಿಯಿಂದ ಮೂನಾ೯ಡಿನಲ್ಲಿ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ : ಮಾನವ ಜನಮ ಸಾಥ೯ಕತೆಗೆ ಆರೋಗ್ಯ ಕಾಳಜಿಯೂ ಅತ್ಯಗತ್ಯ - ಬಾರಿಕೆ ದಿನೇಶ್

ರೋಟರಿ ವುಡ್ಸ್ ವತಿಯಿಂದ ಮೂನಾ೯ಡಿನಲ್ಲಿ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ : ಮಾನವ ಜನಮ ಸಾಥ೯ಕತೆಗೆ  ಆರೋಗ್ಯ ಕಾಳಜಿಯೂ ಅತ್ಯಗತ್ಯ - ಬಾರಿಕೆ ದಿನೇಶ್

ಮಡಿಕೇರಿ ಅ 25 - ದೇವರು ಕೊಟ್ಟಿರುವ ಮಹತ್ವದ ವರವಾಗಿರುವ ಮನುಷ್ಯ ಜನ್ಮವನ್ನು ಸಾಥ೯ಕಗೊಳಿಸಲು ಉತ್ತಮ ಆರೋಗ್ಯ ಕಾಳಜಿಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್ ಹೇಳಿದ್ದಾರೆ.

ಮೂನಾ೯ಡುವಿನ ಗ್ರಾಮಪಂಚಾಯತ್ ಸಭಾಭವನದಲ್ಲಿ ಮಡಿಕೇರಿಯ ರೋಟರಿ ವುಡ್ಸ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಮೂನಾ೯ಡು ಗ್ರಾಮಪಂಚಾಯತ್ ಮತ್ತು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಆಯೋಜಿತ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಹವನ್ನೇ ದೇಗುಲ ಎಂದು ಭಾವಿಸುತ್ತೇವೆ. ಹೀಗಿರುವಾಗ ದೇವಾಲಯದಂತೆಯೇ ನಮ್ಮ ದೇಹದ ಆರಾಧನೆಯೂ ಮುಖ್ಯ ಪಾತ್ರ ವಹಿಸುತ್ತದೆ. ನಿಯಮಿತವಾದ ಆಹಾರ ಸೇವನೆ, ವ್ಯಾಯಾಮ, ಸೂಕ್ತ ಆರೋಗ್ಯ ತಪಾಸಣೆ ಮೂಲಕ ನಮ್ಮ ದೇಹವನ್ನು ಆರಾಧನೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಬಾರಿಕೆ ದಿನೇಶ್, ರೋಗ ಬಂದಾಗ ಮಾತ್ರ ಆಸ್ಪತ್ರೆಗೆ ಹೋಗುವ ಮನೋಭಾವ ಬದಲಾಗಿ, ಆಗಿಂದಾಗ್ಗೆ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವ್ಯಕ್ತಿಯ ಆರೋಗ್ಯ ಉತ್ತಮವಾಗಿದ್ದಾಗ ಆತನಿಂದ ಆರೋಗ್ಯವಂತ ಸಮಾಜಕ್ಕೆ ಬಹುಮುಖ್ಯ ಕೊಡುಗೆ ಲಭಿಸುತ್ತದೆ ಎಂದು ಹೇಳಿದ ಬಾರಿಕೆ ದಿನೇಶ್, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಊಹೆಗೂ ಮೀರಿ ಹೆಚ್ಚಾಗಿ ವ್ಯಾಪಿಸುತ್ತಿದೆ.

ಈ ನಿಟ್ಟಿನಲ್ಲಿ ಇಂಥ ತಪಾಶಣಾ ಶಿಬಿರಗಳು ಕ್ಯಾನ್ಸರ್ ಪತ್ತೆಹಚ್ಚಲು ಮುಖ್ಯವಾಗುತ್ತದೆ ಎಂದು ,ಹೇಳಿದರು.

 ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಟನಾ ಕಾಯ೯ದಶಿ೯, ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಹಬ್ಬಗಳು ಶುಭಸಮಾರಂಭಗಳು ನಮ್ಮ ಜೀವನಕ್ಕೆ ನೆಮ್ಮದಿ, ಸಂತೋಷ ನೀಡಿದರೆ, ಇಂಥ ಆರೋಗ್ಯ ಶಿಬಿರಗಳು ಸಮಾಜದ ಪಾಲಿಗೆ ನಿಜವಾದ ಉತ್ಸವಗಳಾಗಿ ಕಾಣುತ್ತವೆ. ಇಂಥ ಶಿಬಿರಗಳ ಮೂಲಕ ಆರೋಗ್ಯದ ಬಗ್ಗೆ ಕಾಳತಿ ತೋರವುದೇ ಮತ್ತೊಂದು ಸಂಭ್ರಮವಾಗಬೇಕಾಗಿದೆ ಎಂದು ಹೇಳಿದರು. ಕ್ಯಾನ್ಸರ್ ಬಂದರೂ ಜೀವನ ಸೋಲುವುದಿಲ್ಲ ಎಂಬ ಸಂದೇಶವನ್ನು ಎಲ್ಲೆಡೆ ವ್ಯಾಪಿಸಲು ಪ್ರತೀಯೋವ೯ರೂ ಮುಂದಾದಲ್ಲಿ ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೆಯ೯ ತುಂಬಲು ಸಾಧ್ಯವಾಗುತ್ತದೆ. ಆರೋಗ್ಯ ಶಿಬಿರಗಳಲ್ಲಿ ತಪಾಸಣೆ ಮೂಲಕ ವ್ಯಕ್ತಿಯೊಂದಿಗೆ ಆತನ ಕುಟುಂಬ ವಗ೯ವೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಕ್ಷಕ್ಷ ಅನಿಲ್ ಹೆ್ಚ್.ಟಿ. ಮಾತನಾಡಿ, ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಆರೋಗ್ಯ ಮತ್ತು ಶಿಕ್ಷಣದ ಕಾಯ೯ಯೋಜನೆಗಳಿಗೆ ಆದ್ಯತೆ ನೀಡುತ್ತಾ ಬಂದಿವೆ. 225 ದೇಶಗಳಲ್ಲಿನ 45 ಸಾವಿರ ರೋಟರಿ ಸಂಸ್ಥೆಗಳು ಕ್ಯಾನ್ಸರ್ ನಂಥ ಮಾರಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಸಮಾರೋಪಾದಿಯಲ್ಲಿ ಹಮ್ಮಿಕೊಂಡಿದೆ.

 ರೋಟರಿ ವುಡ್ಸ್ ಈ ನಿಟ್ಟಿನಲ್ಲಿ ಮೂನಾ೯ಡು ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಗೆ ಮಾಹಿತಿ ನೀಡಲು ಇಂಥ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು. ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಸದಸ್ಯರು ಕೇವಲ ವಾಣಿಜ್ಯ ಉದ್ದೇಶಕ್ಕೆ ಮಾತ್ರ ಸೀಮಿತರಾಗದೇ ಸಮಾಜದಲ್ಲಿ ಜನಪರ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ಔಷಧಿ ವ್ಯಾಪಾರಸ್ಥರ ಬಳಿ ಜನ ಹೋಗುವುದು ಹೆಚ್ಚಾಗಿರುವಂತೆಯೇ ಔಷಧಿ ವ್ಯಾಪಾರಸ್ಥರು ಸೇವಾ ಕಾಯ೯ಯೋಜನೆಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ ಎಂದೂ ಅನಿಲ್ ಶ್ಳಾಘಿಸಿದರು.

ರೋಟರಿ ವಲಯ 6 ರ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ ಮಾತನಾಡಿ, ಸಮುದಾಯ ಸೇವಾ ಚಟುವಟಿಕೆಗಳಿಗೆ ಪ್ರಸಿದ್ದಿಯಾಗಿರುವ ರೋಟರಿ ಸಂಸ್ಥೆಗಳು ಪೊಲೀಯೋ ನಿಮೂ೯ಲನೆಯಲ್ಲಿಯೂ ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸಿವೆ. ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಹೊರತು ಪಡಿಸಿದಂತೆ ಜಾಗತಿಕವಾಗಿ ೯ರೆಲ್ಲಾ ದೇಶಗಳಲ್ಲಿ ಪೊಲೀಯೋ ನಿಮೂ೯ಲನೆಯಾಗುವಲ್ಲಿ ರೋಟರಿಯ ಪಾತ್ರ ಮಹತ್ವದ್ದು ಎಂದರು. ಕಾಂತೂರು ಮೂನಾ೯ಡು ಗ್ರಾಮಪಂಚಾಯತ್ ಅಧ್ಯಕ್ಷ ಕುಶನ್ ರೈ ಮಾತನಾಡಿ, ಮೂನಾ೯ಡು ಪಟ್ಟಣದಲ್ಲಿ ಮೊದಲ ಬಾರಿಗೆ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಕಾಯ೯ಕ್ರಮವನ್ನು ಹಮ್ಮಿಕೊಂಡಿರುವ ರೋಟರಿ ವುಡ್ಸ್ ಬಗ್ಗೆ ಶ್ಲಾಘಿಸಿದರು. ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಮೂನಾ೯ಡು ಪಂಚಾಯತ್ ಸದಾ ಜತೆಗೂಡಲಿದೆ ಎಂದೂ ಭರವಸೆ ನೀಡಿದರು.

ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಸ್ವಾಥ೯ ರಹಿತ ಸೇವೆಗೆ ರೋಟರಿ ಮಾದರಿಯಾಗಿದೆ. ಹೀಗಾಗಿಯೇ ರೋಟಿ 120 ವಷ೯ಗಳಿಂದ ಜಾಗತಿಕವಾಗಿ ಅತ್ಂತ ಜನಮನ್ನಣೆ ಗಳಿಸಿ ಪ್ರಬಲ ಸಂಸ್ಥೆಯಾಗಿ ಮುಂದುವರೆದಿದೆ ಎಂದರು. ಮತ್ತಷ್ಟು ಗ್ರಾಮೀಣ ಭಾಗಗಳಲ್ಲಿ ರೋಟರಿ ವುಡ್ಸ್ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಿದೆ ಎಂದೂ ಕಿರಣ್ ಕುಂದರ್ ಹೇಳಿದರು.

ಆರೋಗ್ಯ ತಪಾಸಣೆಯಲ್ಲಿ 72 ಮಂದಿ ಆರೋಗ್ಯ ಪರೀಕ್ಷೆ ನಡೆಸಿದರು.ರೋಟರಿ ವುಡ್ಸ್ ಕಾಯ೯ದಶಿ೯ ಪ್ರಮೀಳಾ ಶೆಟ್ಟಿ ವಂದಿಸಿದ ಕಾಯ೯ಕ್ರಮವನ್ನು ವುಡ್ಸ್ ನಿದೇ೯ಶಕ ವಸಂತ್ ಕುಮಾರ್ ನಿರೂಪಿಸಿದರು. ರೋಟರಿ ವುಡ್ಸ್ ನ ಶಿಬಿರ ಸಂಚಾಲಕ ಚಂದ್ರಶೇಖರ್, ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ರೆಜಿಲ್ ರಜನ್ ಹಾಜರಿದ್ದರು. ರೋಟರಿ ವುಡ್ಸ್, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ನಿದೇ೯ಶಕರು, ಗ್ರಾಮಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.