ಎಸ್ ಎಸ್ ಎಲ್ ಸಿ ಫಲಿತಾಂಶ: ಸೋಮವಾರಪೇಟೆಯ ರಿಯಾನ್ (ಅಪ್ಪು ) ಗೆ 568 ಅಂಕ
ಸೋಮವಾರಪೇಟೆ;2025- 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ರಿಯಾನ್ ಎಸ್ ಎ (ಅಪ್ಪು) ಕನ್ನಡದಲ್ಲಿ 124, ಇಂಗ್ಲೀಷ್ 91, ಹಿಂದಿ 100, ಗಣಿತ 75, ವಿಜ್ಞಾನ 81 ಮತ್ತು ಸಮಾಜ ವಿಜ್ಞಾನ 97..ಒಟ್ಟು 625 ಕ್ಕೆ 568 ಅಂಕದೊಂದಿಗೆ 90.88% ಪಡೆದು ತೇರ್ಗಡೆಯಾಗಿದ್ದಾನೆ.
ಉತ್ತಮ ಕ್ರೀಡಾಪಟು, ಸದಾ ಕ್ರೀಡೆಗೆ ಹೆಚ್ಚಿನ ಸಮಯವನ್ನು ಕೊಡುತ್ತಿದ್ದ ರಿಯಾನ್ ಫಲಿತಾಂಶ ಶಾಲೆಗೆ ಖುಷಿ ತಂದುಕೊಟ್ಟಿದೆ. ರಿಯಾನ್ ಸೋಮವಾರಪೇಟೆಯ ಟೈಲರ್ ಆಸಿಫ್ ಮತ್ತು ಲೇಖಕಿ ರುಬೀನಾ ಎಂ.ಎ ರವರ ಪುತ್ರನಾಗಿದ್ದಾನೆ.