ಸಮಥ೯ ಕನ್ನಡಿಗರು ಸಂಸ್ಥೆ ಯಿಂದ ನ. 9 ರಂದು "ನಿಮ್ಮ ಪ್ರತಿಭೆ - ನಮ್ಮ ವೇದಿಕೆ " ಸ್ಪಧೆ೯ಗಳು
ಮಡಿಕೇರಿ ಅ. 15: ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ನವಂಬರ್ 9 ರಂದು ಭಾನುವಾರ ಮಡಿಕೇರಿ ನಗರದ ಓಂಕಾರ ಸದನದಲ್ಲಿ " ನಿಮ್ಮ ಪ್ರತಿಭೆ- ನಮ್ಮ ವೇದಿಕೆ ಹಿಮವನ ಸಾಂಸ್ಕೖತಿಕ ಸಂಗಮ " ಎಂಬ ಸಾಂಸ್ಕೖತಿಕ ಸ್ಪಧಾ೯ ಕಾಯ೯ಕ್ರಮಗಳನ್ನು ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ ಜಯಲಕ್ಷ್ಮಿ ತಿಳಿಸಿದ್ದಾರೆ.
ಸ್ಪಧೆ೯ಗಳ ವಿವರಗಳು ಇಂತಿದೆ, ಛದ್ಮವೇಷ ಸ್ಪರ್ಧೆ. 1 ರಿಂದ 3 ವರ್ಷದ ಮಕ್ಕಳಿಗೆ ಮತ್ತು 4 ರಿಂದ 7 ವರ್ಷದ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ. ಹೆಸರು ನೋಂದಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : 9902651146 - ಬಿ. ಸಿ. ಶಾಂತಿ ಅಚ್ಚಯ್ಯ., 7022884803 - ಕಡ್ಲೇರ ತುಳಸಿ ಮೋಹನ್. ಸಮೂಹ ನೃತ್ಯ. - 8 ರಿಂದ 12 ವರ್ಷದ ಮಕ್ಕಳಿಗೆ. - ನಿಯಮಗಳು. - ತಂಡದಲ್ಲಿ ಕನಿಷ್ಠ 6 ಗರಿಷ್ಠ 10 ಮಕ್ಕಳು ಇರಬೇಕು. ಹಾಡು ಕನ್ನಡದ್ದೇ ಆಗಿರಬೇಕು.
ಸಮಯ 4 ನಿಮಿಷ. ಹೆಸರು ನೋಂದಣಿಗಾಗಿ ಸಂಪರ್ಕಿಸಿ, 9663119670- ಜಯಲಕ್ಷ್ಮಿ. ಕೆ. 8762574584- ಸೌಮ್ಯ ಭಟ್. ಜಾನಪದ ನೃತ್ಯ - ಪ್ರೌಢಶಾಲಾ ಮಕ್ಕಳಿಗೆ. ಜಾನಪದ ಹಾಡು ಕಡ್ಡಾಯ. ಗುಂಪಿನಲ್ಲಿ ಕನಿಷ್ಠ 6 ಗರಿಷ್ಠ 8 ಮಕ್ಕಳು ಇರಬೇಕು. ಸಮಯ : 5 ನಿಮಿಷ., ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸರಿತಾ ಅಯ್ಯಪ್ಪ -9481483457, ಸವಿತಾ ರಾಖೇಶ್ -7975409495 ಚಿತ್ರಕಲೆ - ಪದವಿ ಪೂರ್ವ ವಿದ್ಯಾರ್ಥಿಗಳಿಗೆ - ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎನ್ನುವ ಶೀರ್ಷಿಕೆ ಗೆ ಅನುಗುಣವಾಗಿ ಚಿತ್ರ ಬಿಡಿಸಬೇಕು. ಸಮಯ : 1 ಗಂಟೆ ನೀಡಲಾಗುವುದು.. ಹೆಸರು ನೋಂದಣಿಗಾಗಿ , ಅನಿತಾ ಪ್ರತಾಪ್ :8971680717, ಸವಿತಾ ಅರುಣ್ -9480003811 . ಗಾಯನ ಸ್ಪರ್ಧೆ. - ಪದವಿ ವಿದ್ಯಾರ್ಥಿಗಳಿಗೆ ಸಮೂಹ ಗಾಯನ ಸ್ಪರ್ಧೆ. ದೇಶಭಕ್ತಿ ಗೀತೆ ಅಥವಾ ನಾಡಗೀತೆ ಹಾಡಬೇಕು. ಕನ್ನಡ ಹಾಡೇ ಆಗಿರಬೇಕು. ಗುಂಪಿನಲ್ಲಿ ಕನಿಷ್ಠ 5 ಗರಿಷ್ಠ 10 ಮಂದಿ ಇರಬೇಕು. ಸಮಯ 4 ನಿಮಿಷ., ಹೆಸರು ನೋಂದಣಿಗಾಗಿ : ಸವಿತಾ ರಾಖೇಶ್ - 7975409495, ಬಿ ಸಿ ಶಾಂತಿ - 9902651146. ಗಾಯನ ಸ್ಪರ್ಧೆ -ಮಹಿಳೆಯರಿಗೆ - ಯಾವುದೇ ಕನ್ನಡ ಹಾಡು ಹಾಡಬಹುದು., ಸಮಯ 4 ನಿಮಿಷ, ಸದಸ್ಯೆಯರ ಸಂಖ್ಯೆ ಕನಿಷ್ಠ 6 ಗರಿಷ್ಠ 10 ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸೌಮ್ಯ ಭಟ್ - 8762574584.
ಎಲ್ಲಾ ಸ್ಪಧೆ೯ಗಳಿಗೆ ಹೆಸರು ನೋಂದಾಯಿಸಲು ಕೊನೆ ದಿನ ಅಕ್ಟೋಬರ್ 30. ಸ್ಪಧೆ೯ಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪಕ೯ ಸಂಖ್ಯೆ 9663129670