ಶನಿವಾರಸಂತೆ:ಹಂಡ್ಲಿಯಲ್ಲಿ ಅಂತರರಾಷ್ಟೀಯ ಕಾಫಿ ದಿನಾಚರಣೆ

ಶನಿವಾರಸಂತೆ:ಹಂಡ್ಲಿಯಲ್ಲಿ  ಅಂತರರಾಷ್ಟೀಯ ಕಾಫಿ ದಿನಾಚರಣೆ

ಶನಿವಾರಸಂತೆ:-‘ಭಾರತದದಲ್ಲಿ ಬೆಳೆಯುತ್ತಿರುವ ಉತ್ಕೃಷ್ಟ ಗುಣಮಟ್ಟದ ಕಾಫಿ ಶೇ70 ರಷ್ಟು ಕಾಫಿ ಉತ್ಪನ್ನ ವಿದೇಶಕ್ಕೆ ರಫ್ತಾಗುತ್ತಿದ್ದರೂ ಸಹ ಸ್ಥಳೀಯ ಮಟ್ಟದಲ್ಲಿ ಜನರು ಕಡಿಮೆ ಪ್ರಮಾಣದಲ್ಲಿ ಕಾಫಿಯನ್ನು ಸೇವಿಸುತ್ತಿರುವುದು ಕಳವಳಕಾರಿಯಾಗಿದೆ’ ಎಂದು ಶನಿವಾರಸಂತೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್. ಎಂ ಉಮಾಶಂಕರ್ ಬುಧವಾರ ಅಭಿಪ್ರಾಯಪಟ್ಟರು.

ಅವರು ಹಂಡ್ಲಿ ಕಾಫಿ ಬೆಳೆಗಾರರ ಸಂಘ ಹಾಗೂ ಶನಿವಾರಸಂತೆ ಕಾಫಿ ಬೆಲೆಗಾರರ ಸಂಘ ಸಂಯುಕ್ತಾಶ್ರಯದಲ್ಲಿ ಹಂಡ್ಲಿ ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟಿಯ ಕಾಫಿ ದಿನಾಚರಣೆ ಕಾರ್ಯಕ್ರಮ ಮತ್ತು ಹಂಡ್ಲಿ ಕಾಫಿ ಬೆಳೆಗಾರರ ಸಂಘದ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದರು.

 ಭಾರತದಲ್ಲಿ ಉತ್ಕೃಷ್ಟ ಗುಣಮಟ್ಟದ ಕಾಫಿ ಬೆಳೆಯುತ್ತಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ.ಆದರೆ ಕಾಫಿ ಬೆಳೆಯುತ್ತಿರುವ ಕಡೆಗಳಲ್ಲಿ ಕಾಫಿ ಸೇವಿಸುವುದು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಜನರು ಕಾಫಿಯನ್ನು ಸೇವಿಸುವಂತೆ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕಾಗುತ್ತದೆ.ಈ ಮೂಲಕವಾಗಿ ಸ್ಥಳೀಯ ಜನರು ಕಾಫಿಯನ್ನು ಸೇವಿಸುತ್ತಾರೆ ಜನರು ಕಾಫಿಯನ್ನು ಆರೋಗ್ಯಕರವಾದ ಪೇಯವಾಗಿ ಸೇವಿಸುವುದ್ದರಿಂದ ಕಾಫಿ ಮಾರುಕಟ್ಟೆ ಬೃಹತ್ ಉದ್ದಿಮೆಯಾಗಿ ಬೆಳೆಯುತ್ತದೆ.ಅದೇ ರೀತಿಯಲ್ಲಿ ಬೆಳೆಗಾರರು ಗುಣಮಟ್ಟದ ಕಾಫಿಯನ್ನು ಬೆಳೆಯಬೇಕಾಗುತ್ತದೆ ಎಂದರು.

ಹಂಡ್ಲಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಚಿದಾನಂದ್ ಮಾತನಾಡಿ,ಭಾರತದ ಕಾಫಿಗೆ ಅಂತರಾರಾಷ್ಟಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ನಿಟ್ಟಿನಲ್ಲಿ ಭಾರತೀಯ ಕಾಫಿ ಮಂಡಳಿಯು ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯುವಂತೆ ಬೆಳೆಗಾರರನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟನಲ್ಲಿ ಬೆಳೆಗಾರರು ಗಣಮಟ್ಟದ ಕಾಫಿಯನ್ನು ಬೆಳೆದು ಕಾಫಿ ಮಾರುಕಟ್ಟೆಯನ್ನು ಬೆಳೆಸಬೇಕೆಂದ ಅವರು ಅಂತರಾರಾಷ್ಟಿಯ ಕಾಫಿ ದಿನವನ್ನು ಬೆಳೆಗಾರರು ಕಾಫಿ ಉತ್ಸವವನ್ನಾಗಿ ಆಚರಿಸುವ ಮೂಲಕ ಕಾಫಿ ಬೆಳೆಯ ಮಹತ್ವದ ಬಗ್ಗೆ ಗ್ರಾಹಕರನ್ನು ಮತ್ತು ರೈತರನ್ನು ಜಾಗೃತಿಗೊಳಿಸುವಂತೆ ಮನವಿ ಮಾಡಿದರು. 

ಈ ದಿನ ನಾವು ಬೇರೆಬೇರೆ ಭಾಗದಿಂದ ಬರುವ ಪ್ರವಾಸಿಗರಿಗೆ ಹಾಗೂ ಇತರ ಎಲ್ಲಾ ವಾಹನ ಸವಾರರಿಗೆ ಕಾಫಿ ನೀಡಿ ಇದರ ಮಹತ್ವವನ್ನು ಮನವರಿಕೆ ಮಾಡಲಾಗಿದೆ ನಮ್ಮ ಕಾಫಿಗೆ ಮುಂದಿನ ದಿನದಲ್ಲಿ ಹೆಚ್ಚು ಬೇಡಿಕೆ ಬರಲಿದೆ ಎಂದರು ನಾವು ಗುಣಮಟ್ಟದ ಕಾಫಿ ಬೆಳೆ ಬೆಳೆಯಲು ಪ್ರಯತ್ನ ಪಡಬೇಕು ಎಂದರು.

 ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ವೀರೇಂದ್ರ ಕುಮಾರ್, ಕೇಶವಮೂರ್ತಿ, ಪುಟ್ಟಸ್ವಾಮಿ, ಪ್ರದೀಪ್,ಸಂದೀಪ್, ಎಸ್ ಕೆ ವೀರಪ್ಪ, ಪ್ರದೀಪ್ ಕುಮಾರ್, ಗಿರೀಶ್, ಮುಂತಾದವರಿದ್ದರು . ದಿನದ ಅಂಗವಾಗಿ ಸಾರ್ವಜನಿಕರಿಗೆ ಕಾಫಿಯನ್ನು ಮುಖ್ಯ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ಹಾಗೂ ಬಸ್ ನ ಪ್ರಯಾಣಿಕರಿಗೆ ಉಚಿತವಾಗಿವಿತರಿಸಲಾಯಿತು.