ಶನಿವಾರಸಂತೆ:ನಿವೃತ್ತ ಸೈನಿಕ ಸಂಘದಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಶನಿವಾರಸಂತೆ:ನಿವೃತ್ತ ಸೈನಿಕ ಸಂಘದಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಶನಿವಾರಸಂತೆ: ಶನಿವಾರಸಂತೆ ನಿವೃತ್ತ ಸೈನಿಕ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಶನಿವಾರ 26ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯದ್ದದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಯೋಧರಿಗೆ ನಿವೃತ್ತ ಸೈನಿಕರು ಸೇನೆಯ ಲಾಂಛನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಮೂಲಕ ಗೌರವ ಅರ್ಪಿಸಿದರು.

 ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎ.ಎಸ್.ಮಹೇಶ್,ನಮ್ಮ ವೀರ ಯೋಧರ ಶೌರ್ಯ ಮತ್ತು ಸೈನಿಕರ ಬಲಿದಾನದ ಫಲವಾಗಿ ಕಾರ್ಗಿಲ್ ಯದ್ದದಲ್ಲಿ ಭಾರತ ವಿಜಯಗಳಿಸಿದೆ. ಭಾರತ ಮತ್ತು ಕುತಂತ್ರಿ ಪಾಕಿಸ್ತಾನ ನಡುವೆ ಯುದ್ದದಲ್ಲಿ ನೂರಾರು ಯೋಧರು ಹುತ್ಮಾತರಾದರು 1999 ಜುಲೈ 26 ರಂದು ಕಾರ್ಗಿಲ್ ಯುದ್ದದಲ್ಲಿ ಭಾರತ ವಿಜಯಗಳಿಸಿತ್ತು ಮತ್ತು ಸೈನಿಕರ ಶೌರ್ಯ, ತ್ಯಾಗ ಬಲಿದಾನದ ಸಂಕೇತವಾಗಿ ಪ್ರತಿವರ್ಷ ಜು26 ರಂದು ಕಾರ್ಗಿಲ್ ವಿಜಯ ದಿವಸ್‌ವನ್ನು ಆಚರಿಸಲಾಗುತ್ತಿದ್ದು ಈ ಮೂಲಕ ಕಾರ್ಗಿಲ್ ಹುತಾತ್ಮ ಯೋಧರಿಗೆ ಗೌರವ ಸರ್ಮಪಿಸಲಾಗುತ್ತಿದೆ ಎಂದರು.

ನಿವೃತ್ತ ಸೈನಿಕ ಮತ್ತು ಹಿರಿಯ ಮುಖಂಡ ಕೆ.ವಿ.ಮಂಜುನಾಥ್ ಮಾತನಾಡಿ-ಭಾರತದ ಸೈನಿಕರು ಶೌರ್ಯಕ್ಕೆ ಹೆಸರಾದವರು ಈ ನಿಟ್ಟಿನಲ್ಲಿ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನಿ ಸೈನಿಕರನ್ನು ಹೆಮ್ಮೆಟ್ಟಿಸಿದ್ದ ಮೂಲಕ ಯುದ್ದದಲ್ಲಿ ಭಾರತಕ್ಕೆ ವಿಜಯ ತಂದುಕೊಟ್ಟಿದ್ದಾರೆ ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಎಸ್.ಎನ್.ಪಾಂಡು ಮಾತನಾಡಿ-ವಿದ್ಯಾರ್ಥಿಗಳು ಮತ್ತು ಯುವಕರು ಭಾರತದ ಸೇನೆಯ ಬಗ್ಗೆ ಗೌರವದ ಭಾವನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಸೇನೆಗೆ ಸೇರಲು ಆಸಕ್ತಿ ಹೊಂದುವAತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಕೆ.ಡಿ.ಚಂದ್ರಪ್ಪ, ಕೆ.ಪಿ.ತಿಮ್ಮಯ್ಯ, ಬಿ.ಆರ್.ಆನಂದ್, ಬಿ.ಡಿ.ಪರಮೇಶ್, ಎಚ್.ಪಿ.ಮಹೇಶ್ ಸಂಘದ ಸದಸ್ಯರು ಹಾಜರಿದ್ದರು.