ಸೆ.14 ರಂದು ಶರಣ ಸಾಹಿತ್ಯ ಪರಿಷತ್ತು ಸರ್ವ ಸದಸ್ಯರ ಸಭೆ

ಸೆ.14 ರಂದು ಶರಣ ಸಾಹಿತ್ಯ ಪರಿಷತ್ತು ಸರ್ವ ಸದಸ್ಯರ ಸಭೆ

ಕುಶಾಲನಗರ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸರ್ವಸದಸ್ಯರ ಸಭೆ ಸೆಪ್ಟೆಂಬರ್ ತಿಂಗಳ ತಾ.14 ರಂದು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಯ ಬಸವ ಭವನದಲ್ಲಿ ಪೂರ್ವಾಹ್ನ 11 ಗಂಟೆಗೆ ಜರುಗಲಿದೆ. ಹಾಗಾಗಿ ಕೊಡಗು ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರಿಗೆ ಈಗಾಗಲೇ ಕೇಂದ್ರ ಕಛೇರಿಯಿಂದ ಸಭೆಯ ಆಹ್ವಾನವನ್ನು ಅಂಚೆಯಲ್ಲಿ ಕಳಿಸಲಾಗಿದೆ. ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದ್ದು ಆಗಮಿಸುವವರು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ಇವರ ಸಂಪರ್ಕದ ಮೊಬೈಲ್ ಸಂಖ್ಯೆ 94821 92798 ಇವರಲ್ಲಿ ಸೆ.5 ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.