ಶಿಕಾರಿಪುರ ಹಲ್ಲೆ: ಆರೋಪಿಗಳ ಬಂಧನಕ್ಕೆ ವಿಹೆಚ್‌ಪಿ ಒತ್ತಾಯ

Aug 29, 2026 - 20:19
 0  170
ಶಿಕಾರಿಪುರ ಹಲ್ಲೆ: ಆರೋಪಿಗಳ ಬಂಧನಕ್ಕೆ ವಿಹೆಚ್‌ಪಿ ಒತ್ತಾಯ

ಮಡಿಕೇರಿ: ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಕೊಲೆ ಯತ್ನ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಸಹ ಸಂಯೋಜಕ ದುರ್ಗೇಶ್ ಭಜರಂಗಿ ಮಾತನಾಡಿ, ಅಕ್ರಮ ಜಾನುವಾರು ಸಾಗಣೆಯನ್ನು ತಡೆದಿದ್ದಕ್ಕೆ ಆ.೧೫ ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವಾಹನ ಧ್ವಂಸಗೊಳಿಸಲಾಗಿದೆ. ಇದು ವ್ಯವಸ್ಥಿತ ಸಂಚು. ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ, ಪರವಾನಗಿ ಇಲ್ಲದ ಕಸಾಯಿಖಾನೆಗಳು ಹೆಚ್ಚಾಗಿದ್ದು, ೨೦೨೦ರ ಕಾಯಿದೆ ಇದ್ದರೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು.

ಆರೋಪಿಗಳ ಬಂಧನ, ಜಾಮೀನು ರಹಿತ ಪ್ರಕರಣ, ಸೆಕ್ಷನ್ ೮ ರಂತೆ ಕಟ್ಟಡ ನೆಲಸಮ ಮತ್ತು ಆಸ್ತಿ ಮುಟ್ಟುಗೋಲು, ರಾಜ್ಯಾದ್ಯಂತ ದಾಳಿ, ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಮತ್ತು ರಾತ್ರಿ ಗಸ್ತು ಹೆಚ್ಚಿಸಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಜರಂಗದಳದ ರಾಜೀಶ್, ಅಜೀತ್ ಶೆಟ್ಟಿ, ಮುಕುಂದ್, ಮಣಿ ಹಾಗೂ ಬಜರಂಗದಳದ ಕಾರ್ಯಕರ್ತರು ಇದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0