ಶಿರಂಗಾಲ : ಹಾಲಿನ ಡೇರಿಯಲ್ಲಿ ವಿಶ್ವ ಹಾಲು ದಿನಾಚರಣೆ

Jun 3, 2026 - 11:25
Jun 3, 2026 - 11:54
 0  54
ಶಿರಂಗಾಲ : ಹಾಲಿನ ಡೇರಿಯಲ್ಲಿ ವಿಶ್ವ ಹಾಲು ದಿನಾಚರಣೆ

ಕುಶಾಲನಗರ :ಕೊಡಗು ಜಿಲ್ಲೆ ಸೇರಿದಂತೆ ಹಾಸನ, ಚಿಕ್ಕಮಗಳೂರು ಜಿಲ್ಲೆಗಳು ಹಾಸನ ಹಾಲು ಒಕ್ಕೂಟಕ್ಕೆ ಒಳಗೊಂಡಿದ್ದು, ಈ ಮೂರು ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ 16 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾ‌ರ್ ಹೇಳಿದರು.

 ಸಮೀಪದ ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೆಚ್ಚು ಹಾಲು ಸಂಗ್ರಹದಿಂದ ಹೆಚ್ಚು ಉತ್ಪನ್ನಗಳು ತಯಾರಿಸುವ ಹಿನ್ನೆಲೆಯಲ್ಲಿ ಈಗಾಗಲೇ ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ 900 ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ಮೆಗಾ ಡೇರಿ ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ. ಇದರ ಮೂಲಕ ಹಾಲು ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜತೆಗೆ ಎಲ್ಲಾ ರೀತಿಯ ಸಹಕಾರವನ್ನು ಒಕ್ಕೂಟದ ವತಿಯಿಂದ ನೀಡಲಾಗುವುದು ಎಂದರು.

ನೂರಾರು ರೈತರಿಗೆ ಒಕ್ಕೂಟದ ಸಿಹಿ ಉತ್ಪನ್ನಗಳನ್ನು ನೀಡಲಾಯಿತು. ಈ ಕೂಡಿಗೆ ಡೇರಿ ವ್ಯವಸ್ಥಾಪಕ ನಂದಿಶ್, ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಮಲ್ಲೇಶ್, ಸಹಾಯಕ ವ್ಯವಸ್ಥಾಪಕ ಸಂತೋಷ್, ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಸುರೇಶ್, ಮನುಕುಮಾರ್, ಗಂಗಾಧರ, ವಿಷಕಂಠ, ಕುಮಾರ್ ಸ್ವಾಮಿ, ಸೇರಿದಂತೆ ರೈತರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0