ಸಿದ್ದಾಪುರ: ಟಿಂಬರ್ ಯೂನಿಯನ್ ಸಭೆಯಲ್ಲಿ ಗಲಾಟೆ, ಚಾಕು-ಕಟ್ಟರ್ ದಾಳಿ ಆರೋಪ ,ಮೂವರ ವಿರುದ್ಧ ಪ್ರಕರಣ ‌ದಾಖಲು

Jun 20, 2026 - 13:36
 0  1.1k
ಸಿದ್ದಾಪುರ: ಟಿಂಬರ್ ಯೂನಿಯನ್ ಸಭೆಯಲ್ಲಿ ಗಲಾಟೆ, ಚಾಕು-ಕಟ್ಟರ್ ದಾಳಿ ಆರೋಪ ,ಮೂವರ ವಿರುದ್ಧ ಪ್ರಕರಣ ‌ದಾಖಲು

ಸಿದ್ದಾಪುರ:ಇಲ್ಲಿನ ಚರ್ಚ್ ಹಾಲ್ ನಲ್ಲಿ ಶುಕ್ರವಾರ ನಡೆದ ಟಿಂಬರ್ ಮರ್ಚೆಂಟ್‌ ಸಭೆಯಲ್ಲಿ ಉಂಟಾದ ಗಲಾಟೆಯಲ್ಲಿ ಸಿದ್ದಾಪುರದ ಮೂಸಾ ಅವರು ನೀಡಿದ ದೂರಿನ ಅನ್ವಯ ನೆಲ್ಲಿಹುದಿಕೇರಿ ಗ್ರಾಮದ ಅರ್ಫಾನ್ ಅಹ್ಮದ್, ಮೊಹಮ್ಮದ್ ಸಫ್ವಾನ್ ಹಾಗೂ ಆಶಿಫ್ ಎಂಬುವವರ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ (BNS)2023 (U\s-115(2)_118(1)_351(2)_352,190) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಸಾರಾಂಶ: ಜೂನ್ 19ರ ರಂದುಸಂಜೆ 04:00 ಗಂಟೆಗೆ ಸಿದ್ದಾಪುರದ ಚರ್ಚ್ ಹಾಲ್ ನಲ್ಲಿ ಟಿಂಬರ್ ಯೂನಿಯನ್ ರವರ ಸಭೆಯಲಿ ದೂರುದಾರರಾದ ಸಿದ್ದಾಪುರದ ಮೂಸಾ ಪಿ.ಎಂ ಭಾಗವಹಿಸಿದ್ದರು. ಸಭೆಯನ್ನು ನಡೆಸುತ್ತಿರುವಾಗ ಯೂನಿಯನ್ನ ಸದಸ್ಯತ್ವದ ಹಣಕಾಸಿನ ವಿಚಾರದಲ್ಲಿ ಪಿರ್ಯಾದಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿರುವಾಗ ಸಂಜೆ ಸುಮಾರು 05:30 ಗಂಟೆಗೆ ಸಭೆಯಲಿದ್ದ ಸಫ್ವಾನ್ ಎಂಬುವನು ಏಕಾ-ಏಕಿ ಎದ್ದು ನಿಂತು ನೀನು ಯಾರು ಮಾತಾಡಲು ಎಂದು ಮಲಯಾಳಂ ಭಾಷೆಯಲ್ಲಿ ನಾಯಿಂಡ ಮೊನೆ ನಿನ್ನ ಅಭಿಪ್ರಾಯವನ್ನು ನಿನ್ನ ಮನೆಯಲ್ಲಿ ಇಟ್ಟುಕೊ ಎಂದು ಹೇಳಿದಾಗ ಮಾತಿನ ಚಕಮಕಿ ಆಗಿರುತ್ತದೆ.

ಆಗ ಮೂಸಾ ಅವರು ಅವನಿಗೆ ನಾನು ಹಾರ್ಟ್ ಪೇಷೆಂಟ್ ಆಗಿದ್ದು ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ ಗಲಾಟೆ ಮಾಡಬೇಡ ಎಂದು ಹೇಳುತ್ತಿರುವಾಗಲೇ ಸಫ್ವಾನ್ ಕೈಯಿಂದ ಪಿರ್ಯಾದಿಯವರ ಬಲ ಕೆನ್ನೆಗೆ ಹೊಡೆದು ಕಾಲಿನಿಂದ ಎದೆಗೆ ಒದ್ದು ಕೆಳಗೆ ಬೀಳಿಸಿರುತ್ತಾನೆ. ಆಗ ಅಲೆ ಇದ್ದ ಉಸ್ಮಾನ್, ಮಂಜು, ಸಿರಾಜ್ ರವರು ಬಂದು ಉಪಚರಿಸಿ ಸಮಾಧಾನ ಪಡಿಸಿದ್ದು ಆಗ ಪಿರ್ಯಾದಿಯವರಿಗೆ ಉಸಿರಾಡಲು ತೊಂದರೆ ಉಂಟಾಗಿದ್ದು ಪಿರ್ಯಾದಿಯವರು ಕೂಡಲೇ ತಮ್ಮ ಮಗ ಸಜಾದ್ ನಿಗೆ ಪೋನ್ ಮಾಡಿ ನಡೆದ ವಿಚಾರ ತಿಳಿಸಿದಾಗ ಸಿದ್ದಾಪುರ ನಗರದಲ್ಲಿದ್ದ ಪಿರ್ಯಾದಿಯವರ ಮಗ ಸಜ್ಜಾದ ಮತ್ತು ಪಿರ್ಯಾದಿಯವರ ಹೆಂಡತಿಯ ಅಕ್ಕನ ಮಗನಾದ ಸಿರಾಜ್ ರವರು ತಕ್ಷಣ ಚರ್ಚ್ ಹಾಲ್ ಗೆ ಬಂದು ಪಿರ್ಯಾದಿಯವರನ್ನು ಉಪಚರಿಸುತ್ತಿರುವಾಗ ಸಫ್ವಾನ್ ರವರ ತಮ್ಮನಾದ ಅರ್ಫಾನ್ ನೀವು ಏಕೆ ಇಲ್ಲಿ, ಬಂದಿರುತ್ತೀರಿ ನಾಯಿಂಡ ಮಕ್ಕಳೇ ಎಂದು ಮಲಯಾಳಂ ಭಾಷೆಯಲಿ ಕಿರುಚಾಡುತ್ತಾ, ಏಕಾಏಕಿ ಚಾಕುವಿನಿಂದ ಪಿರ್ಯಾದಿಯವರ ಮಗ ಸಜ್ಜಾದ್ ಎಡ ಎದೆಯ ಮೇಲ್ಬಾಗಕ್ಕೆ ಚುಚ್ಚಿ ರಕ್ತಗಾಯ ಪಡಿಸಿ ಕಾಲಿನಿಂದ ಒದ್ದು ನೆಲಕ್ಕೆ ಬೀಳಿಸಿರುತ್ತಾನೆ.

ಆಗ ತಡೆಯಲು ಬಂದ ಸಿರಾಜ್ ನಿಗೆ ಸಫ್ವಾನ್ ಕಟ್ಟರ್ ಬೋಡಿನಿಂದ ಬೆನ್ನಿನ ಹಿಂಭಾಗದ ಎಡ ಮತ್ತು ಬಲ ಮೇಲ್ಬಾಗಕ್ಕೆ ಕುಯ್ದು ರಕ್ತಗಾಯ ಪಡಿಸಿರುತ್ತಾನೆ. ಆಗ ಅಲ್ಲಿಯೇ ಆಸಿಫ್ ಎಂಬುವನು ಸಿರಾಜಿಗೆ ಸುಮ್ಮನೆ ಬರಬೇಡ ಎಂದು ಹೇಳುತ್ತಾ ಸಿರಾಜ್ ನ ಎದೆಯ ಭಾಗಕ್ಕೆ ಕಾಲಿನಿಂದ ಒದ್ದು ತಳ್ಳಿ, ಬೆಂಚ್ ನ ಮೇಲೆ ಬೀಳಿಸಿದಾಗ ಎಡಕಾಲಿನ ಮಂಡಿ, ಹಾಗೂ ಎಡ ಪಾದದ ಮೇಲ್ಬಾಗಕ್ಕೆ ನೋವು ಉಂಟಾಗಿರುತ್ತದೆ. ಆಗ ಅಲ್ಲಿಯೇ ಇದ್ದ ಉರೇಶ್, ಕಬೀರ್, ಸಿರಾಜ್, ಮತ್ತು ಮಂಜುರವರು ನಮ್ಮನ್ನು ಅಲ್ಲಿಂದ ಹಲ್ಲೆ ಮಾಡಿದವರಿಂದ ರಕ್ಷಿಸಿದರು. ಈ ಸಂದರ್ಭದಲ್ಲಿ ನಮ್ಮ ಮೇಲೆ ಹಲ್ಲೆ ಮಾಡಿದವರು,ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ, ಪಿರ್ಯಾದಿಯವರಿಗೆ ಹಲ್ಲೆ ಮಾಡಿ ರಕ್ತ ಗಾಯ ಪಡಿಸಲು ಉಪಯೋಗಿಸಿದ, ಚಾಕನ್ನು ಆರ್ಫಾನ್, ಕಟ್ಟರ್ ಬೋಡ್ ನ್ನು ಸಫಾನ್, ಆಸಿಫ್ ನೊಂದಿಗೆ ತೆಗೆದುಕೊಂಡು ಹೋಗಿರುತ್ತಾರೆ.

ನಂತರ ಅಲ್ಲಿಯೇ ಇದ್ದ ಇಸ್ಮಾಯಿಲ್ ಹಾಗೂ ಅಫ್ಜಲ್ ರವರು ಯಾವುದೋ ಒಂದು ವಾಹನದಲ್ಲಿ.ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಯ ಬಗ್ಗೆ ದಾಖಲು ಪಡಿಸಿರುತ್ತಾರೆ. ಆದುದರಿಂದ ನನಗೆ ಹಾಗೂ ನನ್ನ ಮಗ ಸಜಾದ್ ಮತ್ತು ಸಿರಾಜ್ ನಿಗೆ ಚಾಕು ಮತ್ತು ಕಟ್ಟರ್ ಬೋಡ್ ನಿಂದ ಚುಚ್ಚಿ, ರಕ್ತಗಾಯ ಪಡಿಸಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ ಸಫಾನ್, ಅರ್ಫಾನ್, ಹಾಗೂ ಆಸೀಫ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಸಾ ಅವರು‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

What's Your Reaction?

Like Like 0
Dislike Dislike 3
Love Love 1
Funny Funny 1
Angry Angry 0
Sad Sad 0
Wow Wow 0