ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಅ.23 ರಂದು ಸಿದ್ದಾಪುರ ಬಂದ್ ಗೆ ಕರೆ

ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಅ.23 ರಂದು ಸಿದ್ದಾಪುರ ಬಂದ್ ಗೆ ಕರೆ

ಸಿದ್ದಾಪುರ :-ಅಂದಾಜು 2.ಕಿ.ಮಿ. ರಸ್ತೆ ಅಗಲೀಕರಣ ಅಭಿವೃದ್ಧಿಗೆ ಒಂದು ವರ್ಷ ವಾಗಲಿದ್ದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಜನ ಆಕ್ರೋಶಗೊಂಡಿದ್ದು ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸದಿದ್ದಲ್ಲಿ ಅ.23 ರಂದು ಸಿದ್ದಾಪುರ ಪಟ್ಟಣ ಬಂದ್ ಗೆ ನಾಗರಿಕ ಹಿತ ರಕ್ಷಣಾ ಸಮಿತಿ ಕರೆ ನೀಡಿದೆ. ವಿವಿಧ ಸಂಘ ಸಂಸ್ಥೆಗಳ ಹಾಗೂ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸಭೆಯನ್ನು ನಡೆಸಿ ನಿರ್ಧಾರ ಕೈಗೊಂಡಿದ್ದಾರೆ.

 11 ತಿಂಗಳ ಹಿಂದೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು 2 km ರಸ್ತೆಗೆ ಒಂದು ವರ್ಷ ಪೂರೈಸುತ್ತಿದ್ದರು ಇಂದಿಗೂ ಅಭಿವೃದ್ಧಿ ಕಾಣದೆ ಸಂಕಷ್ಟದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಸಾರ್ವಜನಿಕರು ಶಾಲಾ ವಿದ್ಯಾರ್ಥಿಗಳು ದಿನನಿತ್ಯ ಸಂಚರಿಸುವ ಸಾವಿರಾರು ವಾಹನಗಳು ಗುಂಡಿ ಹಾಗೂ ಕೆಸರು ಕೊಂಪೆಯಾದ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಮಗಾರಿ ವಿಳಂಬದ ವಿರುದ್ಧ ಈ ಹಿಂದೆ ಶಾಸಕರ ಗಮನ ಸೆಳೆಯಲಾಗಿತ್ತು ಗ್ರಾಮಸ್ಥರ ಮನವಿಗೆ ತಕ್ಷಣ ಸ್ಪಂದಿಸಿ ಆಗಮಿಸಿದ ಶಾಸಕ ಪೊನ್ನಣ್ಣ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ತಕ್ಷಣವೇ ಕಾಮಗಾರಿ ಪೂರ್ಣಗೊಳಿಸುವಂತೆ ಖಡಕ್ ಸೂಚನೆಯನ್ನು ನೀಡಿದ್ದರು . ಮಳೆಯ ಕಾರಣ ನೀಡಿ ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರು ನಿರ್ಲಕ್ಷೆ ತೋರುತ್ತಿದ್ದಾರೆ ಎಂದು ನಾಗರಿಕ ಹಿತರಕ್ಷಣ ಸಮಿತಿಯ ಪ್ರಮುಖರು ಆರೋಪಿಸಿದ್ದಾರೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸದಿದ್ದಲ್ಲಿ ಸಿದ್ದಾಪುರ ಬಂದ್ ಗೆ ಕರೆ ನೀಡಲಾಗಿದ್ದು ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರೀನಾ ತುಳಸಿ, ಸಾಮಾಜಿಕ ಕಾರ್ಯಕರ್ತ ಮುಸ್ತಫಾ , ಆಟೋಚಾಲಕ ಹುಸೇನ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ, ಪ್ರಮುಖರಾದ ಜಯರಾಂ, ರೂಪೇಶ್, ಸಿದ್ದಿಕ್,ರಿಯಾಜ್,ಕರೀಂ, ಸೇರಿದಂತೆ ವರ್ತಕರು ಹಾಜರಿದ್ದರು.