ಸಿದ್ದಾಪುರ: ಕಾಡಾನೆ ಕಾರ್ಯಾಚರಣೆಗೆ ತೊಡಕಾದ ತೋಟದ ಸೋಲಾರ್ ಬೇಲಿ
ಸಿದ್ದಾಪುರ:- ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನು ಕಾಡಿಗಟ್ಟುವ ಆನೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಮುಂಜಾನೆಯಿಂದ ಚಾಲನೆ ದೊರೆಯಿತು. ವಿರಾಜಪೇಟೆ ಅರಣ್ಯ ವಲಯದ ಅಮ್ಮತಿ ಶಾಖೆಯ ಕರಡಿಗೋಡು, ಪುಲಿಯೆರಿ, ಇಂಜಲಗೆರೆ, ಗುಹ್ಯ ಹಾಗು ಸಿದ್ದಾಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಉಪಟಳ ನೀಡುತಿರುವ ಕಾಡನೆಗಳನ್ನು ಮರಳಿ ಕಾಡಿಗೆ ಸಾರ್ವಜನಿಕರು ಕಾರ್ಮಿಕರು ಹಾಗು ಬೆಳೆಗಾರರು ಒತ್ತಡದಿಂದಾಗಿ ಇಂದು ಮುಂಜಾನೆ ಯಿಂದ ಕಾರ್ಯ ಪ್ರವೃತರಾದ ಅರಣ್ಯ ಸಿಬ್ಬಂದಿಗಳು ಸಿಡಿಮದ್ದು ಸಿಡಿಸಿ ಕಾಡಿಗಟ್ಟಿದರು.
ಕರಡಿಗೋಡು ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಮನೆಯನ್ನು ಅವರೆಗುಂದ ಭಾಗದ ಅರಣ್ಯಕ್ಕೆ ಕಟ್ಟುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳು ನಂತರ ಎಮ್ಮೆಗುಂಡಿ ಭಾಗದಲ್ಲಿ ಕಾರ್ಯಾಚರಣೆ ಕೈಗೊಂಡರು. ಆದರೆ ತೋಟಕ್ಕೆ ವಿದ್ಯುತ್ ಬೇಲಿ ಅಳವಡಿಸಿರುವುದು ಹಾಗೂ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದರಿಂದ ಕಾರ್ಯಾಚರಣೆಯನ್ನು ಮೊಟಕು ಗೊಳಿಸಲಾಯಿತು ಎಂದು ವಿಭಾಗ ಅರಣ್ಯಾಧಿಕಾರಿ ಕೆ.ಶಿವರಾಮ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಆರ್.ಆರ್.ಟಿ ತಂಡ ಹಾಗೂ ತಿತಿಮತಿ ಮತ್ತು ವಿರಾಜಪೇಟೆ ಇ.ಇ.ಟಿ ತಂಡ ಸಾಥ್ ನೀಡಿದರು.