ಸೋಮವಾರಪೇಟೆ:ಮನೆಯ ಹಿಂಭಾಗದಲ್ಲಿ ಬರೆ ಕುಸಿತ, ತಕ್ಷಣ ಸ್ಪಂದಿಸಿದ ಡಾ.ಮಂತರ್ ಗೌಡ

ಸೋಮವಾರಪೇಟೆ:ಮನೆಯ ಹಿಂಭಾಗದಲ್ಲಿ ಬರೆ ಕುಸಿತ, ತಕ್ಷಣ ಸ್ಪಂದಿಸಿದ ಡಾ.ಮಂತರ್ ಗೌಡ

ಸೋಮವಾರಪೇಟೆ:ತಾಲ್ಲೂಕಿನ ಆಲೆಕಟ್ಟೆ ಪಂಪ್ ಹೌಸ್ ರಸ್ತೆಯ ಮೊಯ್ದೀನ್ ಹಾಗೂ ರಮ್ಮಿ ರವರ ಮನೆಯ ಹಿಂಭಾಗದಲ್ಲಿ ಅತೀಯಾದ ಮಳೆಯ ಕಾರಣ ಚರಂಡಿಯ ನೀರಿನ ರಭಸಕ್ಕೆ ಬರೆ ಕುಸಿದು ಅಪಾಯಕಾರಿ ಪರಿಸ್ಥಿತಿ ಇರುವುದನ್ನು ಕಾಂಗ್ರೆಸ್ ಮುಖಂಡರಾದ ಅಶ್ರಫ್ ರವರು ಶಾಸಕರಾದ ಡಾ.ಮಂತರ್ ಗೌಡ ರವರ ಗಮನಕ್ಕೆ ತಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ವಹಿಸಲು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾಗ್ ಅಳವಡಿಸಿ ಬರೆಕುಸಿತವನ್ನು ತಪ್ಪಿಸಿ ಅನಾಹುತವನ್ನು ತಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಡಾ.ಮಂತರ್ ರವರಿಗೆ ಕಾಂಗ್ರೆಸ್ ಮುಖಂಡರಾದ ಅಶ್ರಫ್ ರವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.