ಸೋಮವಾರಪೇಟೆ: ಮನೆಯ ಗೋಡೆ ಕುಸಿತಗೊಂಡು ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಸ್ಥಳಕ್ಕೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಭೇಟಿ

ಸೋಮವಾರಪೇಟೆ: ಮನೆಯ ಗೋಡೆ ಕುಸಿತಗೊಂಡು ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಸ್ಥಳಕ್ಕೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಭೇಟಿ

ಸೋಮವಾರಪೇಟೆ :- ಮನೆಯ ಗೋಡೆ ಕುಸಿದು ಕಾರ್ಮಿಕ‌ ಮಹಿಳೆ ದುರ್ಮರಣಗೊಂಡ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ಅಪ್ಪಚುರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವಾನ ಹೇಳಿದರು. ಇಂದು ಬೆಳಿಗ್ಗೆ 5.30ಕ್ಕೆ ಹಾನಗಲ್ಲು ಗ್ರಾಮದಲ್ಲಿ ಮನೆಯ ಗೋಡೆಕುಸಿದು ಸುಷ್ಮಾ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು,ಮನೆಯೊಳಗಿದ್ದ ಈರ್ವರು ಮಕ್ಕಳು ಹಾಗೂ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿನೀಡಿದ ರಂಜನ್ ಘಟನೆಯಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಅವರು ಕುಟುಂಬವರ್ಗಕ್ಕೆ ಸಾಂತ್ವಾನ ಹೇಳುವುದರೊಂದಿಗೆ,ದೈರ್ಯತುಂಬಿದರು. ಈ ಸಂದರ್ಭ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಕಿಸಿದ ಅವರು ಅಗತ್ಯ ತುರ್ತು ಕ್ರಮಕೈಗೊಳ್ಳುವಂತೆ ತಿಳಿಸಿದರು. ಘಟನೆಯ ಸ್ಥಳಕ್ಕೆ ಭೇಟಿ ಸಂದರ್ಭ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್,ಕಾರ್ಯದರ್ಶಿ ಸೋಮೇಶ್ ಹಾಗೂ ಮುಂತಾದವರು ಹಾಜರಿದ್ದರು.