ಸೋಮವಾರಪೇಟೆ:ಹಾಲು ಸರಬರಾಜು ಮಾಡುವ ವಾಹನದ ಮೇಲೆ ಕಾಡಾನೆ ದಾಳಿ
ಸೋಮವಾರಪೇಟೆ: ನಡುರಾತ್ರಿ ಕಾಡಾನೆಯೊಂದು ಹಾಲು ಸರಬರಾಜು ಮಾಡುವ ವಾಹನದ ಮೇಲೆ ದಾಳಿ ಮಾಡಿದ ಘಟನೆ ಯಡವನಾಡು ಅರಣ್ಯ ಸಮೀಪ ಸುಳೆಬಾವಿ ತಿರುವಿನಲ್ಲಿ ಶನಿವಾರ ನಡೆದಿದೆ. ಕೂಡಿಗೆ ಡೈರಿಯಿಂದ ಪ್ರತಿನಿತ್ಯ ನಂದಿನಿ ಹಾಲು ಸರಬರಾಜು ಮಾಡುವ ವಾಹನ ಸೋಮವಾರಪೇಟೆಗೆ ತೆರಳುತ್ತಿತ್ತು. ಶನಿವಾರ ಮದ್ಯರಾತ್ರಿ 12.45ರ ವೇಳೆಗೆ ಯಡನನಾಡು ಅರಣ್ಯ ಸಮೀಪ ಸುಳೆಬಾವಿ ತಿರುವಿನಲ್ಲಿ ಕಾಡಾನೆಯೊಂದು ಮುಖ್ಯರಸ್ತೆಗೆ ದಾಟಿದೆ. ಇದೇ ಮಾರ್ಗವಾಗಿ ತೆರಳುತ್ತಿದ್ದ ವ್ಯಾನ್ ಚಾಲಕ ಕಾಡಾನೆಯನ್ನು ಗಮನಿಸಲಿಲ್ಲ. ಏಕಾಏಕಿ ಬಂದ ಕಾಡಾನೆ ವ್ಯಾನ್ ಮೇಲೆ ದಾಳಿ ಮಾಡಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

