ಸೋಮವಾರಪೇಟೆ:ಉರೂಸ್ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿಯಿಂದ ಗಾಂಜಾ ಸೇವನೆ, ಪ್ರಕರಣ ದಾಖಲು

Jun 7, 2026 - 06:34
Jun 7, 2026 - 06:52
 0  951
ಸೋಮವಾರಪೇಟೆ:ಉರೂಸ್ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿಯಿಂದ ಗಾಂಜಾ ಸೇವನೆ, ಪ್ರಕರಣ ದಾಖಲು

ಸೋಮವಾರಪೇಟೆ, ಜೂ. 6: ಪಟ್ಟಣದ ಸುನ್ನಿ ಹನಫಿ ಜಾಮಿಯಾ ಮಸೀದಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾದಕ ವಸ್ತು ಸೇವಿಸಿದ ಆರೋಪದ ಮೇರೆ ಹುಣಸೂರಿನ ಯುವಕನೋರ್ವನನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ದಿನ ಹನಫಿ ಜಾಮಿಯಾ ಮಸೀದಿಯ ವತಿಯಿಂದ ಉರೂಸ್‌ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹುಣಸೂರಿನ ಆಜಾದ್ ನಗರ ನಿವಾಸಿ ಸೈಯದ್ ಫಾರೂಕ್ ದರ್ವೇಶ್ ಎಂಬಾತ ಮಾದಕ ವಸ್ತು ಸೇವಿಸಿ ನಿಷಾಮತ್ತನಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಠಾಣಾಧಿಕಾರಿ ಖದೀಜಾ ಹಾಗೂ ಸಿಬ್ಬಂದಿ ತೆರಳಿ ಪರಿಶೀಲಿಸಿದ್ದು, ಸೈಯದ್ ಫಾರೂಕ್‌ನನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ ನಡೆಸಿದ ಹಿನ್ನೆಲೆ, ಮಾದಕ ವಸ್ತು ಸೇವಿಸಿರುವುದು ಖಚಿತಗೊಂಡಿದೆ. ನಂತರ ಸೈಯದ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 1
Sad Sad 0
Wow Wow 0