ಸೋಮವಾರಪೇಟೆ: ವಿಷದ ಬಾಟಲಿ ಹಿಡಿದು ರೈತರ ಪ್ರತಿಭಟನೆ
ಸೋಮವಾರಪೇಟೆ ತಾಲ್ಲೂಕಿನ ಕಚೇರಿ ಎದುರು ವಿಷದ ಬಾಟಲಿ ಹಿಡಿದು ರೈತರ ಜಮೀನಿನ ಪೋಡಿ ದುರಸ್ತಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲೂಕಿನ ವಿವಿಧ ಭಾಗದಿಂದ ರೈತರು ಭಾಗಿ ದುರಸ್ತಿಗೆ ಪಟ್ಟು ಹಿಡಿದಿರುವ ರೈತರು ತಹಶೀಲ್ದಾರ್ ಮನವೊಲಿಕೆಗೂ ಜಗ್ಗದೆ ಪ್ರತಿಭಟನೆ ನಡೆಸಿದ್ದಾರೆ. ಕಂದಾಯ ಸಚಿವರ ವೀಡಿಯೋ ಕಾನ್ಫರೆನ್ಸ್ ಗೆ ತೆರಳಿದ ತಹಶೀಲ್ದಾರ್ ತೆರಳಿದ್ದಾರೆ. ವಿಷದ ಬಾಟಲಿ ಹಿಡಿದು ರೈತರ ಪ್ರತಿಭಟನೆ ನಡೆಸುತ್ತಿದ್ದು, ಸಂಜೆ 5 ಗಂಟೆಯೊಳಗೆ ಹಿರಿಯ ಅಧಿಕಾರಿಗಳು ಬರದಿದ್ದರೆ ವಿಷ ಸೇವಿಸಿ ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದಾರೆ.