Kodagu

ಸೋಮವಾರಪೇಟೆ: ಅಕ್ರಮ ಗೋವು ಸಾಗಾಟ ಪ್ರಕರಣ:ಮೂವರು ಆರೋಪಿಗಳ ಬಂಧನ

admincoorgdaily

ಸೋಮವಾರಪೇಟೆ:- ಅಕ್ರಮ ಗೋವು ಸಾಗಾಟದ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳ ನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

 ಕೊಡಗಿನಿಂದ  ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿ ಕೊಂಡಿದ್ದ ಅರಕಲಗೂಡಿನ ಹೂಳಲುಗೋಡು ಗ್ರಾಮದ ದಿಲ್ ನವಾಜ್, ಅಲಿಯಾಸ್ ಶಾನವಜ್, ಹಾಗೂ ಸಯ್ಯದ್ ಗಫೂರ್ ಎಂಬುವರನ್ನು ಬಂಧಿಸಲಾಗಿದ್ದು ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ.

ಇತ್ತೀಚೆಗೆ ಸೋಮವಾರಪೇಟೆ ಇಂದ ಗೋವು ಸಾಗಾಟ ಮಾಡುತ್ತಿದ್ದ ವೇಳೆ ಕಾಗಡಿಕಟ್ಟೆ ಬಳಿ ಗೋವುಗಳಿದ್ದ ವಾಹನ ಅಪಘಾತಕ್ಕೀಡಾಗಿ ಮಗುಚಿಕೊಂಡಿತ್ತು. ನಂತರ ಬೆಂಗಾವಲು ಇನೋವಾ ಕಾರಿನಲ್ಲಿ ಮೂವರು ಆರೋಪಿಗಳು ಪರಾರಿಯಾಗಿದ್ದರು.ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇತ್ತೀಚೆಗೆ ಗೋವುಗಳ ಕಳ್ಳಸಾಗಾಣೆ, ಗೋ ಮಾಂಸ ಮಾರಾಟ ದಂದೇ ನಿರಂತರವಾಗಿ ನಡೆಯುತ್ತಿದ್ದು ಇದನ್ನು ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣವೇದಿಕೆ ಕಾರ್ಯಕರ್ತರು ಸೋಮವಾರಪೇಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.