ಹೋಟೆಲ್ ಮತ್ತು ಬೇಕರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸೋಮವಾರಪೇಟೆ ತಾಲ್ಲೂಕು ಆಹಾರ ನಿರೀಕ್ಷಕರು
ಕೊಡ್ಲಿಪೇಟೆ: ಪಟ್ಟಣದಲ್ಲಿರುವ ಎಲ್ಲಾ ಹೋಟೆಲ್ ಮತ್ತು ಬೇಕರಿ ಹಾಗೂ ಕೋಳಿ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸೋಮವಾರಪೇಟೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ರವರು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಕುರಿತು ಎಚ್ಚರಿಕೆ ನೀಡಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳನ್ನು ಮಾತ್ರ ಬಳಸುವಂತೆ ಸೂಚನೆ ನೀಡಿದರು. ಸ್ವಚ್ಛತೆ ಕುರಿತು ಗಮನಹರಿಸುವಂತೆ ಸೂಚನೆ ಕೊಟ್ಟರು. ವಾಣಿಜ್ಯ ವಹಿವಾಟು ನಡೆಸುವವರು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಗಳನ್ನು ಮಾತ್ರ ಬಳಸಬೇಕೆಂದು ನಿಯಮವಿದ್ದು ಅನಧಿಕೃತವಾಗಿ ಗ್ರಹ ಬಳಕೆಯ ಸಿಲಿಂಡರ್ ಗಳನ್ನು ಬಳಸಿದರೆ ಸಿಲಿಂಡರ್ ಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಆಹಾರ ಇಲಾಖೆ ಸಿಬ್ಬಂದಿ ವಿನೋದ್ ಕುಮಾರ್ ಇದ್ದರು,