Kodagu

ಶ್ರೀ ಬಸವೇಶ್ವರ ಮೂರ್ತಿಗೆ 2.8ಕೆಜಿ ತೂಕದ ಬೆಳ್ಳಿಯ ಮುಖವಾಡವನ್ನು ನೀಡಿದ ಸೋಮವಾರಪೇಟೆ ಉದ್ಯಮಿ ಎಚ್.ಬಿ.ಹೃಷಿಕೇಶ್ ಅವರಿಗೆ ಸನ್ಮಾನ

admincoorgdaily

ಸೋಮವಾರಪೇಟೆ :ಸಮೀಪದ ಹೊಸೂರು ಬೆಟ್ಟದ ಮೇಲಿರುವ ಶ್ರೀ ಬಸವೇಶ್ವರ ಮೂರ್ತಿಗೆ 2.8ಕೆಜಿ ತೂಕದ ಬೆಳ್ಳಿಯ ಮುಖವಾಡವನ್ನು ನೀಡಿದ ಸೋಮವಾರಪೇಟೆ ಉದ್ಯಮಿ ಎಚ್.ಬಿ.ಹೃಷಿಕೇಶ್ ಅವರನ್ನು ಈಚೆಗೆ ದೇವಾಲಯದ ಕೌಟೆಕಾಯಿ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ದೇವಾಲಯ ಆಡಳಿತ ಮಂಡಳಿಯ ರಮೇಶ್, ಎಚ್.ಟಿ.ಪುಟ್ಟೇಗೌಡ, ಜಗದೀಶ್ ಗಣ್ಯರಾದ ಪ್ರತಿಭಾ ಮಂಜು, ಮುರುಳಿ ಮೋಹನ್ ಇದ್ದರು.