ಸೋಮವಾರಪೇಟೆ ತಾಲ್ಲೂಕು ವಾಹನ ಸಂಚಾರ ಬದಲಿ ಮಾರ್ಗ ವ್ಯವಸ್ಥೆ

ಸೋಮವಾರಪೇಟೆ ತಾಲ್ಲೂಕು  ವಾಹನ ಸಂಚಾರ ಬದಲಿ ಮಾರ್ಗ ವ್ಯವಸ್ಥೆ

ಮಡಿಕೇರಿ ಜೂ.17(:-ಪ್ಯಾಕೇಜ್ ನಂಬರ್ 808-ಇಂಪ್ರೂಮೆಂಟ್ಸ್ ಟು ಬೆಂಗಳೂರು-ಜಾಲ್ಸೂರು ರಸ್ತೆ ಎಸ್‍ಎಚ್-85 ರಿಂದ ಸಿಎಚ್ 239.76 ಕಿ.ಮೀ.ರಿಗೆ 254.71 ಕಿ.ಮೀ.(ಇನ್ ಸೆಲೆಕ್ಟೆಡ್ ರೀಚಸ್) ಇನ್ ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ(ಇಂಡೆಂಟ್ ನಂ.ಪಿಡಬ್ಲ್ಯುಡಿ/2023-24/ಆರ್‍ಡಿ/ವರ್ಕ್-ಇಂಡೆಂಟ್ 9803) (Package No. 808-Improvements to Bangalore -Jalsoor road Sh- 85 from Ch 239.76 Km to 254.71 Km (in selected reaches) in Somwarpet Taluk, Kodagu District (Indent No: PWD/2023-24/RD/WORK-INDENT 9803) (ಸರಪಳಿ 239.76 ರಿಂದ 241.00 ಕಿ.ಮೀ.) ಸಿಸಿ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಮತ್ತು ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ(ತಿದ್ದುಪಡಿ ನಿಯಮಗಳು 1990) ನಿಯಮ 221 ಎ(5) ರಲ್ಲಿ ದತ್ತವಾದ ಅಧಿಕಾರದಂತೆ 2026 ರ ಮೇ, 13 ರಿಂದ ಜೂನ್, 12 ರವರೆಗೆ ಸೋಮವಾರಪೇಟೆ ತಾಲ್ಲೂಕು-ಬೆಂಗಳೂರು ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಭಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದು, ಈ ಆದೇಶವನ್ನು ಜುಲೈ, 10 ರವರೆಗೆ ಮುಂದುವರೆಸಿ ಸೋಮವಾರಪೇಟೆ ತಾಲ್ಲೂಕು ಬೆಂಗಳೂರು ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಭಂದಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ.  

ಸಾರ್ವಜನಿಕರು ಸೋಮವಾರಪೇಟೆ-ಹಾನಗಲ್ಲು-ತಲ್ತಾರಶೆಟ್ಟಳ್ಳಿ-ತಾಕೇರಿ ಮಾರ್ಗ, ಮಾವಿನಕಟ್ಟೆ-ತಲ್ತಾರಶೆಟ್ಟಳಿ ಮಾರ್ಗವಾಗಿ ಬಳಸುವುದು. ಈ ಬಗ್ಗೆ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 116 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ರ(ತಿದ್ದುಪಡಿ ನಿಯಮಗಳು 1990) ನಿಯಮ 221ಎ(2) ರಂತೆ ಅವಶ್ಯವಿರುವ ಸಂಜ್ಞೆ/ ಸೂಚನಾ ಫಲಕವನ್ನು ಅಳವಡಿಸಲು ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಇವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.