ಸೋಮವಾರಪೇಟೆ ತಾಲ್ಲೂಕು ಬಂದ್:ಕೊಡ್ಲಿಪೇಟೆಯಲ್ಲಿ ಬಂದ್ ಗೆ ಬೆಂಬಲ

ಸೋಮವಾರಪೇಟೆ ತಾಲ್ಲೂಕು ಬಂದ್:ಕೊಡ್ಲಿಪೇಟೆಯಲ್ಲಿ ಬಂದ್ ಗೆ ಬೆಂಬಲ

ಸೋಮವಾರಪೇಟೆ: ಸಿ&ಡಿ ಕೃಷಿ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕರೆ ನೀಡಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ಕೊಡ್ಲಿಪೇಟೆಯಲ್ಲಿ ಬೆಂಬಲ ವ್ಯಕ್ತವಾಗಿದೆ‌. ಕೊಡ್ಲಿಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ಕೆಲವು ಶಾಲೆಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಬ್ಯಾಂಕ್ ಮತ್ತು ಕೆಲವು ಶಾಲೆಗಳು ತೆರೆದಿದ್ದರಿಂದ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಜನಪ್ರದಿನಿಧಿಗಳು ಕಾಫಿ ಬೆಳೆಗಾರರು, ಚೇಂಬರ್ ಆಫ್ ಕಾಮರ್ಸ್ ಮತ್ತು ವರ್ತಕರ ಸಂಘ ದವರು ಸೇರಿ ಬಂದ್ ಗೆ ಬೆಂಬಲ ಕೋರಿ ಮುಚ್ಚಿಸಿದರು. ಹಾಸನ , ಅರಕಲಗೂಡು ಮತ್ತು ಸಕಲೇಶಪುರಕ್ಕೆ ಸರಕಾರಿ ಬಸ್ ಗಳ ಸಂಚಾರ ಎಂದಿನಂತೆ ಕಂಡುಬಂದಿತ್ತು. ಕೆಲವು ಆಟೋಗಳು ಸಂಚಾರ ನಡೆಸಿದರು. ಖಾಸಗಿ ಬಸ್ ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು,