ಸೋಮವಾರಪೇಟೆ: ಹಾನಗಲ್ ಶೆಟ್ಟಳ್ಳಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ

ಸೋಮವಾರಪೇಟೆ: ಹಾನಗಲ್ ಶೆಟ್ಟಳ್ಳಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ

ಸೋಮವಾರಪೇಟೆ :ಸಮೀಪದ ಹಾನಗಲ್‌ಶೆಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್, ಚಂದ್ರೋದಯ ಯುವಕ ಸಂಘದ ಅಧ್ಯಕ್ಷ ಸಚಿನ್, ನಾವು ಪ್ರತಿಷ್ಠಾನ ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು, ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸುಮನ ಮ್ಯಾಥ್ಯು, ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಜರ್ಮನಿಯ ಶಿಕ್ಷಕರಾದ ಸಂತೋಷ್ ಆವಣ್ಣವರ್, ಶಾಲೆಯ ಶಿಕ್ಷಕರಾದ ಸುಕುಮಾರ್, ಮಂಜುನಾಥ್, ಹಾನಗಲ್ಲು ಬಾಣೆ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ ಮತ್ತಿತರರು ಇದ್ದರು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿ ಸಂಭ್ರಮಿಸಿದರು.