ಸೋಮವಾರಪೇಟೆ:ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ, ಸ್ವಾತಂತ್ರ್ಯ ದಿನಾಚರಣೆಗೆ ಗೈರಾದರೆ ಕ್ರಮದ ಎಚ್ಚರಿಕೆ
ಸೋಮವಾರಪೇಟೆ: ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ತಹಸೀಲ್ದಾರ್ ಕ್ಲಾಸ್ ತೆಗೆದುಕೊಂಡ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ. ಆಗಸ್ಟ್ 15ಕ್ಕೆ ಅಧಿಕಾರಿಗಳು ಗೈರಾದರೆ ಕ್ರಮದ ಎಚ್ಚರಿಕೆಯನ್ನು ಸೋಮವಾರಪೇಟೆ ತಾಲ್ಲೂಕು ತಹಸೀಲ್ದಾರ್ ಕೃಷ್ಣಮೂರ್ತಿ ನೀಡಿದ್ದಾರೆ.ತಹಶೀಲ್ದಾರ್ ಅವರು ಅಧಿಕಾರಿಗಳಿಗೆ ಪೋನ್ ಮಾಡಿ ಸಭೆಗೆ ಕರೆಯಿಸಿರುವ ಘಟನೆ ಕೂ ನಡೆದಿದೆ.ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರೀಯ ಹಬ್ಬ ಎಲ್ಲಾರೂ ಕೈ ಜೋಡಿಸಬೇಕು,ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಸಭೆಯಲ್ಲಿ ತಹಶೀಲ್ದಾರ್ ಹೇಳಿದರು.