ಆಗಸ್ಟ್ 3 ರಂದು ಅಮ್ಮತ್ತಿಯಲ್ಲಿ ಕಥೆ ಹೇಳುವ ಸ್ಪಧೆ೯
ಮಡಿಕೇರಿ: ಕೊಡಗು ಪತ್ರಕತ೯ರ ಸಂಘದ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್, ಅಮ್ಮತ್ತಿ ಇವರ ಸಹಯೋಗದಲ್ಲಿ ಆಗಸ್ಟ್ 3 ರಂದು ಕಥಾ ಸಮಯ. ಕಥೆ ಹೇಳುವ ಸ್ಪಧೆ೯ ಆಯೋಜಿಸಲಾಗಿದೆ ಎಂದು ಪತ್ರಕತ೯ರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮದೋಷ್ ಪೂವಯ್ಯ ಮಾಹಿತಿ ನೀಡಿದ್ದಾರೆ.
ಆ. 3 ರಂದು ಬೆಳಗ್ಗೆ 10.30 ಗಂಟೆಗೆ ಕಾವಾಡಿ ಅಮ್ಮತ್ತಿಯ ಕಾಮದೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಆವರಣದಲ್ಲಿ ಆಯೋಜಿತ ಕಥಾ ಸಮಯ.. ಬನ್ನಿ ನಾವೊಂದು ಕಥೆ ಹೇಳೋಣ ಎಂಬ ಕಥಾ ಕಾಯ೯ಕ್ರಮವನ್ನು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಉದ್ಘಾಟಿಸಲಿದ್ದಾರೆ. ಕೊಡಗು ಪತ್ರಿಕಾಭವನದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವಕಾಮತ್, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ, ಬಾರಿಯಂಡ ಜೋಯಪ್ಪ, ಅಸೀಮಾ ಮಾಸಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ, ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್, ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ರಾಮಚಂದ್ರ ಭಟ್ , ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ , ಪತ್ರಕತ೯ರ ಸಂಘದ ವಿರಾಜಪೇಟೆ ತಾಲೂಕು ಘಟಕದ ಪ್ರಧಾನ ಕಾಯ೯ದಶಿ೯ ಉಷಾ ಪ್ರೀತಂ ಕಾಯ೯ಕ್ರಮದಲ್ಲಿ ಹಾಜರಿರುತ್ತಾರೆ. ವಿದ್ಯಾಥಿ೯ ವಿಭಾಗ ಮತ್ತು ಸಾವ೯ಜನಿಕ ವಿಭಾಗದಲ್ಲಿ ಪ್ರತೀ ಸ್ಪಧಿ೯ಗೆ ತಲಾ 3 ನಿಮಿಷಗಳಂತೆ ಕಥೆ ಹೇಳುವ ಸ್ಪಧೆ೯ ಜರುಗಲಿದೆ ಎಂದೂ ಮುಲ್ಲೇಂಗಂಡ ಮದೋಷ್ ಪೂವಯ್ಯ ಮಾಹಿತಿ ನೀಡಿದ್ದಾರೆ.