ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ:ಮಹಿಳೆ ಹಾಗೂ ಮಗುವಿನ ಕಾಲಿ‌ಗೆ ಕಚ್ಚಿದ ನಾಯಿ

ಪೊನ್ನಂಪೇಟೆ: ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಅಂಗನವಾಡಿಗೆ ತೆರಳುತ್ತಿದ್ದ ಮಗುವಿಗೆ ಬೀದಿ ನಾಯಿಯೊಂದು ಕಚ್ಚಿ ಗಾಯಗೊಳಿಸಿದ ಘಟನೆ ಬೆನ್ನಲ್ಲೇ ತೊರೆಬೀದಿಯಲ್ಲಿ ಸುನಿತಾ ಎಂಬುವರ ಪುತ್ರಿ ಸೌಮ್ಯ ಎಂಬವರಿಗೆ ನಾಯಿ ಕಾಲಿಗೆ ಕಚ್ಚಿ ಗಂಭೀರ ಗಾಯ ಉಂಟಾಗಿದೆ. ಗಾಯಾಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ.