Kodagu

ತಮಿಳುನಾಡು ವಿಧಾನಸಭಾ ಚುನಾವಣೆ: ತೆನ್ನಿರ ಮೈನಾ ರವರಿಗೆ ಪ್ರಚಾರದ ಹೊಣೆಗಾರಿಕೆ

admincoorgdaily

ತಮಿಳುನಾಡು ವಿಧಾನಸಭಾ ಚುನಾವಣೆ: ತೆನ್ನಿರ ಮೈನಾ ರವರಿಗೆ ಪ್ರಚಾರದ ಹೊಣೆಗಾರಿಕೆ

ಮಡಿಕೇರಿ; ಇದೇ ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಶಿವಗಂಗಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾರೈಕುಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಜವಾಬ್ದಾರಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರಿಗೆ ಎ.ಐ.ಸಿ.ಸಿ ನೀಡಿ ಆದೇಶ ಹೊರಡಿಸಲಾಗಿದೆ.

ಎ.ಐ.ಸಿ.ಸಿ ಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಡಾ ಸುನೀಲ್ ಪನ್ವಾರ್ ರವರು ಕರ್ನಾಟಕ ರಾಜ್ಯದಿಂದ ಒಟ್ಟು ಹದಿನೈದು ನಾಯಕರನ್ನು ಗುರುತಿಸಿ ಜವಾಬ್ದಾರಿ ನೀಡಿದ್ದು ಕೊಡಗು ಜಿಲ್ಲೆಯಿಂದ ತೆನ್ನಿರ ಮೈನಾರವರನ್ನು ಆಯ್ಕೆ ಮಾಡಲಾಗಿದೆ.