ಸ್ವಚ್ಛ ಕೊಡಗು-ಸುಂದರ ಕೊಡಗು ಆಂದೋಲನಕ್ಕೆ ಸಾಥ್ ನೀಡಿದ ಟಾಟಾ ಕಾಫಿ
ವಿರಾಜಪೇಟೆ:ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಟಾಟಾ ಕಾಫಿ ಸಂಸ್ಥೆಯು ಗ್ರಾಮ ಪಂಚಾಯತಿಯೊಂದಿಗೆ ಕೈಜೋಡಿ,ಸಿ ಸಂಸ್ಥೆಯ ಸಿಬ್ಬಂದಿಗಳು ಪಟ್ಟಣ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.
ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಟಾಟಾ ಕಾಫಿ ಲಿಮಿಟೆಡ್, ಗ್ಲೇನ್ ಲೋರ್ನಾ ಟೀ ಎಸ್ಟೇಟ್ ಟಿ.ಶೆಟ್ಟಿಗೇರಿ ಮತ್ತು ಗ್ರಾಮ ಪಂಚಾಯತಿ ಟಿ.ಶೆಟ್ಟಿಗೇರಿ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಕೊಡಗು ಸುಂದರ ಕೊಡಗು ಆಂದೋಲನ ಅಂಗವಾಗಿ ಟಿ.ಶೆಟ್ಟಿಗೇರಿ ಯ ಕೆ.ಕೆ.ಆರ್ ನಿಂದ ಟಿ.ಶೆಟ್ಟಿಗೇರಿ ವರೆಗೆ ಹಾಗೂ ಪಟ್ಟಣದಲ್ಲಿ ಸ್ವಚ್ಛ ತಾ ಕಾರ್ಯ ನಡೆಸಿದರು.ರಸ್ತೆ ಬದಿಯ ಕಸ ಮತ್ತು ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಇತರ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಕಸ ಸಂಗ್ರಹಣಾ ಸ್ಥಳಕ್ಕೆ ರವಾನಿಸಿದರು.
ಈ ಸಂದರ್ಭದಲ್ಲಿ ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳಾದ ಬಿ.ಟಿ. ಕುಶಾಲಪ್ಪ, ಟಿ.ಸಿ. ಸುಧಾ,ಕೆ ಎಂ.ತಮ್ಮಯ್ಯ ವಿಜಯಕುಮಾರ್,ಪುಷ್ಪ ಮತ್ತು ಟೀ. ಎಸ್ಟೇಟ್ ನ ಸಿಬ್ಬಂದಿಗಳು ಕಾರ್ಮಿಕರು ಭಾಗವಹಿಸಿದ್ದರು.