ಸಂಭ್ರಮದಿಂದ ಜರುಗಿದ ಭಾಗಮಂಡಲ ಬಳಿಯ ತಾವೂರು ಮಖಾಂ ಉರೂಸ್

Apr 18, 2026 - 16:44
 0  139
ಸಂಭ್ರಮದಿಂದ ಜರುಗಿದ ಭಾಗಮಂಡಲ ಬಳಿಯ ತಾವೂರು ಮಖಾಂ ಉರೂಸ್

ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು :ಭಾಗಮಂಡಲ ಸಮೀಪದ ತಾವೂರು ಮಖಾಂ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮ ಶ್ರದ್ಧಾ ಭಕ್ತಿಯಿಂದ ಯಶಸ್ವಿಯಾಗಿ ನಡೆಯಿತು. 

ಇತಿಹಾಸ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಎಮ್ಮೆಮಾಡು ಸೂಫಿ ಸಹೀದ್ (ನ.ಮ)ರವರ ವಾಸ ಸ್ಥಳವಾದ ತಾವೂರಿನಲ್ಲಿ ಅಂತ್ಯವಿಶಾಂತಿ ಪಡೆಯುತ್ತಿರುವ ಔಲಿಯಗಳ ಹೆಸರಿನಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮಕ್ಕೆ ತಾವೂರ್ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಅವರು ದ್ವಜರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಸಯ್ಯಿದ್ ಅಬ್ದುಲ್ ಅಝಿಝ್ ತಂಙಳ್ ಎಮ್ಮೆಮಾಡು ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ಸಾಮೂಹಿಕ ಪ್ರಾರ್ಥನೆ ನೆರವೇರಿತು.

ಕಾರ್ಯಕ್ರಮವನ್ನು ತಾವೂರು ಮುಸ್ಲಿಂ ಜಮಾತ್ ಖತೀಬರಾದ ಶಿಯಾಬುದ್ದೀನ್ ಜೌಹರಿ ಉದ್ಘಾಟಿಸಿದರು.ಕುಂಜಿಲ ಮಸೀದಿಯ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಮುಖ್ಯ ಪ್ರಭಾಷಣ ನಡೆಸಿದರು.

ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು

ಚೆಟ್ಟಿಮಾನಿ ಮಸೀದಿಯ ಖತೀಬರಾದ ನಾಸರ್ ಸಖಾಫಿ ಉದ್ಘಾಟಿಸಿ ಮಾತನಾಡಿ ದಾನಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಇಸ್ಲಾಮಿನ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಯ್ಯಿದ್ ಶಿಯಾಬುದ್ದೀನ್ ಆಹದಲ್ ಮುತ್ತನ್ನೂರ್ ತಂಙಳ್ ಮತ ಪ್ರವಚನ ಹಾಗೂ ದುಆ ನೇತೃತ್ವ ವಹಿಸಿ ಮಾತನಾಡಿ ಇದೊಂದು ಪುಣ್ಯ ಸ್ಥಳ ಇಸ್ಲಾಂ ಪ್ರಚಾರಕ್ಕಾಗಿ ಕೊಡಗಿಗೆ ಬಂದು ಇಲ್ಲಿ ಅಂತ್ಯ ವಿಶ್ರಾಂತಿ ಪಡೆದ್ದಿದ್ದಾರೆ.ಇಲ್ಲಿನ ಉರೂಸ್ ಕಾರ್ಯಕ್ರಮ ಇನ್ನು ಕೂಡ ವಿಜೃಂಭಣೆಯಿಂದ ನಡೆಯಲಿ ಎಂದು ದುಆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು,ಸಾಮಾಜಿಕ, ರಾಜ್ಯಕೀಯ,ನೇತಾರರು ಭಾಗವಹಿಸಿದರು.ಸಂಜೆ ಮೌಲೂದ್ ಪಾರಾಯಣ ನಡೆದ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭ ಮಸೀದಿಯ ಖತೀಬರಾದ ಶಿಯಾಬುದ್ದೀನ್ ಜೌಹರಿ,ತಾವೂರು ಮುಸ್ಲಿಂ ಜಮಾಅತ್ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ. ಎಚ್ ,ಉಪಾಧ್ಯಕ್ಷ ಮಜೀದ್ ಎಂ.ಎಂ,ಕಾರ್ಯದರ್ಶಿ ಹಾರಿಸ್ ಕೆ.ಯು,ಕೋಶಾಧಿಕಾರಿ ಉವೈಸ್,ಇಸ್ಮಾಯಿಲ್ ಮುಸ್ಲಿಯಾರ್,ಚೆಟ್ಟಿಮಾನಿ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ರಫೀಕ್ ಸಖಾಫಿ,ಅಬ್ದುಲ್ ಲತೀಫ್, ಅಬ್ದುಲ್ ಗಫ್ಫಾರ್,ಮೊಯ್ದು,ಖಾದರ್, ಅಬ್ದುಲ್ಲ,ಕರೀಂ,ಹಂಸ,ಅಬ್ದುಲ್ ಶುಕೂರ್, ಅಬ್ದುಲ್ ರಹ್ಮಾನ್,ಖಾದರ್, ಮೊಯಿದೀನ್ ಕುಟ್ಟಿ,ಖಾಸಿಂ,ಇಬ್ರಾಹಿಂ ಪಿ.ಎಸ್, ಮಜೀದ್,ಶಫೀಕ್,ಜಮಾಅತ್ ಪದಾಧಿಕಾರಿಗಳು, ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹಾಫಿಜ್ ಕೆ.ಎ.ಆಶಿಕ್ ಸ್ವಾಗತಿಸಿ, ಉವೈಸ್ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0