ಶಾಸಕ ಎ.ಎಸ್ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಶಿಕ್ಷಕರು
ಬೆಂಗಳೂರು: ವಿಧಾನಸೌಧ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ರವರನ್ನು ಭೇಟಿ ಮಾಡಿ ವೇತನ ಹೆಚ್ಚಳ ಮತ್ತು ಸೇವಾ ಭದ್ರತೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಸುಮಾರು 300ಕ್ಕೂ ಅಧಿಕ ಶಿಕ್ಷಕರು ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳಲ್ಲಿ ಗೌರವಧನ ಮತ್ತು ಹೊರಗುತ್ತಿಗೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ 2,100/- ರೂ ವೇತನ, ನಂತರ 2010ರಲ್ಲಿ ರೂ 4,400/- 2017 ರಲ್ಲಿ ರೂ 6,400/-, 2021 ರಲ್ಲಿ ರೂ 10,500/- ವೇತನವನ್ನು ನೀಡುತ್ತಿದ್ದಾರೆ. MOD ಎಂಬ ಹೊಸ ನಿಯಮದ ಅನ್ವಯ ಮಾಸ್ಟರ್ ಆನ್ ಡ್ಯೂಟಿ ಭತ್ಯೆ 3,150/- ಹಾಗೂ ಸಾರಿಗೆ ಭತ್ಯೆ 3,000/- ರೂ ಸೇರಿ ಒಟ್ಟು 6,150/- ಸೇರಿ ಒಟ್ಟಾಗಿ 16,650/-ರೂಗಳನ್ನು ನೀಡಲಾಗುತ್ತಿದೆ. MOD ಭತ್ಯೆಯನ್ನು ಸಂಜೆಯಿಂದ ಮುಂಜಾನ ಪ್ರಾರ್ಥನೆ ಸಮಯದವರೆಗೆ ಮಾಡಿದರೆ ಮಾತ್ರ ನೀಡಲಾಗುತ್ತದೆ. PF ಹಣ ಕಡಿತ ಗೊಳಿಸಲಾಗಿದೆ ಎಲ್ಲಾ ಬೇಡಿಕೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಮ್ಮ ನೇತೃತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಪರಿಗಣಿಸಲು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಶಿಕ್ಷಕರ ಮುಖಂಡರು ಉಪಸ್ಥಿತರಿದ್ದರು