Kodagu

ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಯ ನಂತರ ಪ್ರಥಮ ಹುಂಡಿ ಪರ್ಕಾವಣೆ: ಎಷ್ಟು ಲಕ್ಷ ರೂ ಸಂಗ್ರಹವಾಗಿದೆ ಗೊತ್ತಾ!

admincoorgdaily

ಮಡಿಕೇರಿ: ತಾಲ್ಲೂಕಿನ ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ – ತಲಕಾವೇರಿ ದೇವಾಲಯದಲ್ಲಿ ದಿನಾಂಕ: 17-10-2025 ರಂದು ಜರುಗಿದ “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜಾತ್ರೆಯ ನಂತರ ಪ್ರಥಮ ಹುಂಡಿ ಪರ್ಕಾವಣೆಯನ್ನು 20-09-2025 ರಿಂದ 29-10-2025 ರವರೆಗೆ, ದಿನಾಂಕ: 29-10-2025 ರ ಬುಧವಾರ ಬೆಳಿಗ್ಗೆ 8.00 ಗಂಟೆಯಿಂದ ಭಾಗಮಂಡಲ ಕೆನರಾ ಬ್ಯಾಂಕ್ ಸಿಬ್ಬಂದಿ, ಭಾಗಮಂಡಲ ಆರಕ್ಷಕ ಠಾಣಾ ಸಿಬ್ಬಂದಿಯವರು, ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳು, ತಕ್ಕಮುಖ್ಯಸ್ಥರು ಮತ್ತು ಸಿಬ್ಬಂದಿಯವರು ಮತ್ತು ಸ್ವಯಂ ಸೇವಕರು ಹಾಗೂ ಭಾಗಮಂಡಲ ಕಂದಾಯ ಇಲಾಖೆ ಸಿಬ್ಬಂದಿಯವರ ಸಮಕ್ಷಮ ವೀಡಿಯೋ ಚಿತ್ರೀಕರಣದೊಂದಿಗೆ "ಹುಂಡಿ ಪರ್ಕಾವಣೆ" ಯನ್ನು ನಡೆಸಲಾಗಿತ್ತು.

 ₹.18,05,000/- (ರೂಪಾಯಿ ಹದಿನೆಂಟು ಲಕ್ಷದ ಐದು ಸಾವಿರಗಳು ಮಾತ್ರ) ಮೊತ್ತವು ಸಂಗ್ರಹವಾಗಿದೆ. ವಿವರ ಕೆಳಕಂಡಂತಿದೆ:

1. ಶ್ರೀ ತಲಕಾವೇರಿ ದೇವಾಲಯ - ₹. 7,27,389/-

2. ಶ್ರೀ ಭಗಂಡೇಶ್ವರ ದೇವಾಲಯ - ₹.5,44,333/- 3. ಅನ್ನ ಸಂತರ್ಪಣಾ ನಿಧಿ - ₹. 2,52,867/- 4. ಇ-ಹುಂಡಿ - ₹.2,80,411/- ಒಟ್ಟು ₹.18,05,000/- (ರೂಪಾಯಿ ಹದಿನೆಂಟು ಲಕ್ಷದ ಐದು ಸಾವಿರಗಳು ಮಾತ್ರ) ಸಂಗ್ರಹವಾಗಿದೆ ಎಂದು ದೇವಾಲಯ ಇಒ ಚಂದ್ರಶೇಖರ ಮಾಹಿತಿ ನೀಡಿದ್ದಾರೆ.