ಕೊಡಗಿನಲ್ಲಿ ಎಲ್ಲೆಲ್ಲೂ ಸ್ವಚ್ಚತೆಯ ಮಂತ್ರ: ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ
ಮಡಿಕೇರಿ: ನಭೂತೋ..ಎಂಬಂತೆ ಜಿಲ್ಲೆಯಾದ್ಯಂತ ಸ್ವಚ್ಚತೆಗೆ ಆದ್ಯತೆ ನೀಡಿದ ಜನತೆ. - 320 ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದಾರೆ. ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಕೊಡಗು - ಸುಂದರ ಕೊಡಗು ಹೆಸರಿನ ಸ್ವಚ್ಚತಾ ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಅತ್ಯುತ್ತಮ ಸ್ಪಂದನ ದೊರಕಿದೆ.
ಜಿಲ್ಲೆಯ ಎಲ್ಲೆಲ್ಲೂ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಸಂಘಸಂಸ್ಥೆಗಳ ಸದಸ್ಯರು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಕೊಡಗಿನ ಸ್ವಚ್ಚತೆ ಸಂಬಂಧಿತ ಕಾಳಜಿ ತೋರಿದ್ದಾರೆ. ಮಡಿಕೇರಿಯಲ್ಲಿ ಕಸ ಹೆಕ್ಕುವ ಮೂಲಕ ಸ್ವಚ್ಚ ಕೊಡಗು - ಸುಂದರ ಕೊಡಗು ಅಭಿಯಾನಕ್ಕೆ ಶಾಸಕ ಡಾ.ಮಂಥರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಚಾಲನೆ ನೀಡಿದರು.
ಸ್ವಚ್ಛ ಮತ್ತು ಸುಂದರ ಕೊಡಗು ನಿರ್ಮಾಣದ ಜವಾಬ್ದಾರಿ ಜಿಲ್ಲೆಯ ಪ್ರತೀಯೋವ೯ರ ಮೇಲಿದೆ, ಕೊಡಗನ್ನು ಸ್ವಚ್ಚತೆಯಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಸ್ವಚ್ಚತಾ ಆಂದೋಲನದ ಆಯೋಜನೆ ಶ್ಲಾಘನೀಯ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಿ ಹೇಳಿದರು.
ಕೊಡಗು ಜಿಲ್ಲೆಯ ಸುಂದರ ಪ್ರಕೃತಿ, ಸಂಪನ್ಮೂಲ ಕಾಪಾಡದಿದ್ದರೆ ಭವಿಷ್ಯದಲ್ಲಿ ತೊಡಕು ಉಂಟಾಗುತ್ತದೆ. ಈಗಾಗಲೇ ಏಕಬಳಕೆ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ. ಮಡಿಕೇರಿಯಲ್ಲಿ 2 ಲೀಟರ್ ಗಿಂತ ಕಡಿಮೆ ಸಂಗ್ರಹ ಸಾಮರ್ಥ್ಯದ ನೀರಿನ ಬಾಟಲ್ ಗಳ ಮಾರಾಟ, ಹಾಗೂ ಳಕೆಯನ್ನೂ ನಿಷೇಧಿಸಲಾಗಿದೆ. ಇದರಿಂದ ಕಸದ ಪ್ರಮಾಣ ಕಡಿಮೆಯಾಗಿದೆ. ಎಂದು ಹೇಳಿದ ಡಾ.ಮಂಥರ್ ಗೌಡ, ಜಿಲ್ಲೆಯ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು. .
ಸ್ವಚ್ಚ ಕೊಡಗು - ಸುಂದರ ಕೊಡಗು ಸ್ವಚ್ಚತಾ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ಮೈಸೂರಿನ ತ್ಯಾಜ್ಯ ಸಂಗ್ರಹಾಲಯಕ್ಕೆ ಕೊಂಡೊಯ್ದು ವಿಲೇವಾರಿ ಮಾಡಲಾಗವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದರು.
ಶಾಸಕ ಡಾ.ಮಂಥರ್ ಗೌಡ , ಜಿಲ್ಲಾಧಿಕಾರಿ ವೆಂಕಟ್ ರಾಜ್ ನಗರದ ತಿಮ್ಮಯ್ಯ ವೖತ್ತದ ವ್ಯಾಪ್ತಿಯಲ್ಲಿ ತ್ಯಾಜ್ಯ ಹೆಕ್ಕಿದ್ದಲ್ಲದೇ ರಸ್ತೆ ಬದಿಯ ಚರಂಡಿಯೊಳಕ್ಕೂ ಇಳಿದು, ಅಲ್ಲಿ ಬಿದ್ದಿದ್ದ ಬಾಟಲಿ, ಕಸ ತ್ಯಾಜ್ಯವನ್ನು ಹೆಕ್ಕಿ ಮಾದರಿಯಾದರು. ಕೊಡಗಿನಾದ್ಯಂತ 320 ಕ್ಕೂ ಅಧಿಕ ಸಂಘಸಂಸ್ಥೆಗಳು ಏಕಕಾಲದಲ್ಲಿ ಸ್ವಚ್ಚತಾ ಆಂದೋಲನದಲ್ಲಿ ಪಾಲ್ಗೊಂಡದ್ದು ಗಮನಾಹ೯ವಾಗಿತ್ತು.
ಮಡಿಕೇರಿಯ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನ ವಿದ್ಯಾಥಿ೯ಗಳೇ 60 ಕ್ಕೂ ಅಧಿಕ ಚೀಲ ತ್ಯಾಜ್ಯ ಸಂಗ್ರಹಿಸಿದ್ದು ನಗರದಲ್ಲಿ ತ್ಯಾಜ್ಯ ತುಂಬಿರುವ ಪ್ರಮಾಣಕ್ಕೆ ನಿದಶ೯ನದಂತಿತ್ತು. ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ, ಗೋಣಿಕೊಪ್ಪ, ಸುಂಟಿಕೊಪ್ಪ, ಮೂನಾ೯ಡು, ಮರಗೋಡು, ಗಾಳಿಬೀಡು, ಶನಿವಾರಸಂತೆ, ಕೊಡ್ಲಿಪೇಟೆ, ಪಾಲಿಬೆಟ್ಟ, ಪೊನ್ನಂಪೇಟೆ, ಬಾಳೆಲೆ, ಕುಟ್ಟ, ಶ್ರೀಮಂಗಲ, ನೆಲ್ಯ ಹುದಿಕೇರಿ, ಸುಂಟಿಕೊಪ್ಪ, ಭಾಗಮಂಡಲ, ತಾಳತಮನೆ, ಮಾದಾಪುರ, ಸೇರಿದಂತೆ ಜಿಲ್ಲೆಯಾದ್ಯಂತ ಅಪೂವ೯ ಸ್ಪಂದನ ದೊರಕಿದೆ ಎಂದು ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ ಪ್ರಧಾನ ಕಾಯ೯ದಶಿ೯ ನಾಸಿರ್ ಅಹಮ್ಮದ್ ತಿಳಿಸಿದ್ದಾರೆ. ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಜಾರಿಗೊಂಡ ಸ್ವಚ್ಚ ಕೊಡಗು - ಸುಂದರ ಕೊಡಗು ಅಭಿಯಾನಕ್ಕೆ ಕೊಡಗು ಜಿಲ್ಲಾಡಳಿತ, ಜಿ.ಪಂ., ಪ್ರವಾಸೋದ್ಯಮ ಇಲಾಖೆ, ಮಡಿಕೇರಿ ನಗರಸಭೆ, ಸ್ಥಳೀಯ ಸಂಸ್ಥೆಗಳು ,ಕೊಡಗು ಚೇಂಬರ್ ಆಫ್ ಕಾಮಸ್೯, ಕೊಡಗು ಹೋಂಸ್ಟೇ ಅಸೋಸಿಯೇಷನ್, ರೋಟರಿ, ಲಯನ್ಸ್ ಸಂಸ್ಥೆಗಳು, ರೆಡ್ ಕ್ರಾಸ್, ಕೊಡಗು ಅಭಿವೖದ್ದಿ ಸಮಿತಿ, ಖಾಸಗಿ ಶಿಕ್ಷಣ ಸಂಸ್ಥೆ, ವಿವಿಧ ಸಂಘಸಂಸ್ಥೆಗಳು ಬೆಂಬಲ ಸೂಚಿಸಿ ಜಿಲ್ಲಾದ್ಯಂತ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡವು.