ಕಳೆದ ಎರಡು ಗಂಟೆಯಿಂದ ಇಡೀ ಸಿದ್ದಾಪುರ ಟ್ರಾಫಿಕ್ ಜಾಮ್
ಸಿದ್ದಾಪುರ:ವಿರಾಜಪೇಟೆ ಸಿದ್ದಾಪುರ ರಸ್ತೆ ಕಾಮಗಾರಿ ನಡೆಯುತ್ತಿದ್ದು ಗುರುವಾರ ರಾತ್ರಿ ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಅಲ್ಲದೆ ಗುರುವಾರ ರಾತ್ರಿ ಕೂಡಾ ರಸ್ತೆ ಕಾಮಗಾರಿ ನಡೆಯಲಾಗಿದ್ದು, ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದರಿಂದ ಇಂದು ಬೆಳಿಗ್ಗೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ನೂರಾರು ವಾಹನಗಳು ಸಾಲುಗಟ್ಟಿ ನಿಂತಿದೆ. ವಿರಾಜಪೇಟೆ ರಸ್ತೆ ಮಾರ್ಗ ವಾಹನ ಸಂಚಾರ ಕಷ್ಟಕರವಾಗಿರುವುದರಿಂದ ಪಟ್ಟಣದ ಎಲ್ಲಾ ರಸ್ತೆಗಳು ಬ್ಲಾಕ್ ಆಗಿದೆ. ಕೆಸರಿನಲ್ಲಿ ಸಿಲುಕಿದ ದ್ವಿಚಕ್ರ ಚಾಲಕರು ಕೆಸರಿನಲ್ಲಿ ಬಿದ್ದು ಮುಂದೆ ಸಾಗಿದರೆ, ಕೆಲವು ಶಾಲಾ ಮಕ್ಕಳು ಸಹ ಕೆಸರಿನಲ್ಲಿ ಬಿದ್ದು ಗಂಟೆಗಳ ಬಳಿಕ ಮಕ್ಕಳು ಶಾಲೆ ತಲುಪಿದೆ. ಕೆಸರಿನಲ್ಲಿ ಸಲುಕಿದ ಬಸ್ ಗಳನ್ನು ಜೆಸಿಬಿ ಮೂಲಕ ಎಳೆಯಲಾಗಿದೆ.
ಕೆಸರುಮಯವಾಗಿರುವ ರಸ್ತೆ ಸರಿ ಮಾಡದೆ ಸಂಚಾರ ಸುಲಭವಲ್ಲ. ವಿರಾಜಪೇಟೆ ಸಿದ್ದಾಪುರ ರಸ್ತೆ ಕಾಮಗಾರಿ ಪ್ರಾರಂಭದಿಂದಲೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಾ ಸಾಗಿದ್ದು, ಸಾರ್ವಜನಿಕರಿಗೆ ತೊಂದರೆ ನೀಡದೆ ಕಾಮಗಾರಿ ಮುಂದುವರೆಯಲಿ ಎಂದು ಸ್ಥಳೀಯರು ಸಂಬಂಧಪಟ್ಟವರಲ್ಲಿ ಆಗ್ರಹಿಸಿದ್ದಾರೆ.