ಕಾವೇರಿ ನದಿಗೆ ಸ್ನಾನಕ್ಕೆ ಇಳಿದ ಇಬ್ಬರು ನೀರುಪಾಲು
ಕುಶಾಲನಗರ, ಏ 19: ಕಾವೇರಿ ನದಿಗೆ ಸ್ನಾನಕ್ಕೆ ಇಳಿದ ಇಬ್ಬರು ನೀರುಪಾಲಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್ ವ್ಯಾಪ್ತಿಯಲ್ಲಿ ನಡೆದಿದೆ. ಮೃತರು ಪಿರಿಯಾಪಟ್ಟಣ ತಾಲೂಕಿನ ಭಾಗದ ನಿವಾಸಿಗಳು ಎಂದು ತಿಳಿದು ಬಂದಿದೆ. ಸ್ನಾನಕ್ಕೆ ಆಗಮಿಸಿದ ನಾಲ್ವರ ಪೈಕಿ ಇಬ್ಬರು ನೀರು ಪಾಲಾಗಿದ್ದು,ಓರ್ವನ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬನ ಮೃತದೇಹಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
What's Your Reaction?
Like
2
Dislike
0
Love
1
Funny
0
Angry
0
Sad
6
Wow
0
