ವಿವಿಧ ಸಂಸ್ಥೆ; ವಂತಿಕೆ ಪಾವತಿಸಲು ಮನವಿ

ವಿವಿಧ ಸಂಸ್ಥೆ; ವಂತಿಕೆ ಪಾವತಿಸಲು ಮನವಿ

ಮಡಿಕೇರಿ:-ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣವನ್ನು ಸಂವರ್ಧನ ಗೊಳಿಸುವುದಕ್ಕೆ ಆರ್ಥಿಕವಾಗಿ ಬಲಿಷ್ಠಗೊಳಿಸಲು ಹಾಗೂ ಕಲ್ಯಾಣ ಯೋಜನೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 1969 ರಿಂದ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, 1965 ರ ಪ್ರಕರಣ 2(4) ಪ್ರಕರಣ 7 ಮತ್ತು 7ಎ ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮಗಳು, 1968 ರ ನಿಯಮ-3 ರ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆ ಕಾಯ್ದೆ-1948 2(ಡಿ)ರಡಿ ನೋಂದಣಿಯಾಗಿರುವ ಎಲ್ಲಾ ನೋಂದಾಯಿತ ಕಾರ್ಖಾನೆಗಳು, ಪ್ಲಾಂಟೇಷನ್‍ಗಳು, ಕಾರ್ಯಾಗಾರಗಳು, ಮೋಟಾರು ದೊಡ್ಡ ಬಸ್ ಬಾಡಿಗೆ ಸೇವೆ, ವಿದ್ಯುತ್ತನ್ನು ಉಪಯೋಗಿಸಿ 10 ಕ್ಕಿಂತ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುವ ಹಾಗೂ ವಿದ್ಯುತ್ ಉಪಯೋಗಿಸದೇ 20 ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು ಹಾಗೂ ಗುತ್ತಿಗೆ ಕಾರ್ಮಿಕ ಕಾಯ್ದೆ 1970 ರ ಅಡಿಯಲ್ಲಿ 20 ಕ್ಕಿಂತ ಹೆಚ್ಚು ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಲ್ಲಿ ಮತ್ತು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ 1961 ಹಾಗೂ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960 ರ ಅಡಿಯಲ್ಲಿ 50 ಕ್ಕಿಂತ ಹೆಚ್ಚಿನ ಸಿಬ್ಬಂದಿ ಮತ್ತು ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ/ ಐಟಿಬಿಟಿ ಸಂಸ್ಥೆಗಳು, ಚಾರಿಟೇಬಲ್/ ಶಿಕ್ಷಣ ಸಂಸ್ಥೆಗಳು ಹಾಗೂ ಕಾಯ್ದೆಗಳಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಪ್ರತೀ ವರ್ಷ ಜನವರಿ ದಿನಾಂಕ 1 ರಿಂದ 15 ನೇ ತಾರೀಕಿನ ಒಳಗಾಗಿ ಮಂಡಳಿಗೆ ವಂತಿಕೆ ಪಾವತಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ವಿಳಂಬವಾದಲ್ಲಿ ಬಡ್ಡಿ ಸಹಿತ ಪಾವತಿಸಲು ಅವಕಾಶವಿದೆ.

 ಪ್ರತಿ ಕಾರ್ಮಿಕನ ಡಿಸೆಂಬರ್ ಮಾಹೆಯ ವೇತನದಿಂದ ರೂ.50 ನ್ನು ಕಡಿತಗೊಳಿಸಿ ಅದಕ್ಕೆ ಪ್ರತಿಯಾಗಿ ಮಾಲೀಕರ ರೂ.100 ನ್ನು ಸೇರಿಸಿ ಒಬ್ಬ ಕಾರ್ಮಿಕನ ಪರವಾಗಿ ಒಟ್ಟು ರೂ.150 ನ್ನು ಪ್ರತಿ ವರ್ಷ ಜನವರಿ 15 ನೇ ದಿನಾಂಕದೊಳಗೆ ಆನ್‍ಲೈನ್ ಮೂಲಕ ಪಾವತಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ವಿಳಂಬವಾದಲ್ಲಿ ದಂಡ ಸಹಿತವಾಗಿ ಮಂಡಳಿಗೆ ವಂತಿಕೆ ಪಾವತಿಸುವುದು ಕಡ್ಡಾಯವಾಗಿದೆ. ಕಾರ್ಖಾನೆಗಳು, ಕಾರ್ಯ ಸಂಸ್ಥೆಗಳ ಆಡಳಿತ ವರ್ಗದವರಿಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್‍ಸೈಟ್ https:/klwbapps.karnataka.gov.in ಅಲ್ಲಿ ನೋಂದಣಿ ಮಾಡಿಕೊಂಡು ಕಡ್ಡಾಯವಾಗಿ ವಂತಿಗೆಯನ್ನು ಆನ್‍ಲೈನ್ ಮುಖಾಂತರ ಪಾವತಿಸಲು ಹಾಗೂ ಇನ್ನು ಮುಂದೆ ಯಾವುದೇ ಚೆಕ್, ಡಿಡಿ ಗಳನ್ನು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದೆ. ಸಂಸ್ಥೆಯನ್ನು ನೋಂದಾಯಿಸಲು ಹೆಚ್ಚಿನ ಮಾಹಿತಿಗೆ ಮಂಡಳಿಯ ದೂರವಾಣಿ ಸಂಖ್ಯೆ 82772-91175, 82771-20505, 9141602562, 9483710329 ಹಾಗೂ 9141585402 ಮೂಲಕ ಸಂಪರ್ಕಿಸಬಹುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಟಿ.ಕಾವೇರಿ ಅವರು ತಿಳಿಸಿದ್ದಾರೆ.