ವೀರಭದ್ರೇಶ್ವರ ವರ್ಧಂತಿ ಮಹೋತ್ಸವ: ಕಿರಿಕೊಡ್ಲಿ ಮಠದಲ್ಲಿ ವಿಶೇಷ ಪೂಜೆ
ಸೋಮವಾರಪೇಟೆ:-ವೀರಭದ್ರೇಶ್ವರ ವರ್ಧಂತಿ ಮಹೋತ್ಸವದ ಅಂಗವಾಗಿ ತಾಲೂಕಿನ ಕಿರಿಕೊಡ್ಲಿ ಮಠದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರಸ್ವಾಮಿ ಅವತರಿಸಿದರೆಂದು ಪ್ರತೀಥಿ ಇದ್ದು ಈ ಭಾರಿ ಗೌರಿಹಬ್ಬದ ದಿನವೇ ಬಂದಿರುವುದು ವಿಶೇಷ. ಇಂದು ಮಠದಲ್ಲಿ ಶ್ರೀ.ಸದಾಶಿವ ಸ್ವಾಮೀಜಿ ವೀರಭದ್ರ ದೇವರಿಗೆ ಅಷ್ಟೋತ್ತರ,ಅರ್ಚನೆ ನಂತರ ಮಹಾಮಂಗಳಾರತಿ ನೆರವೇರಿಸಿದರು.