ನಿಯಮ ಉಲ್ಲಂಘನೆ;ಮೂರು ವಾಹನಗಳ ಮೇಲೆ‌ ಪ್ರಕರಣ,ಏಳು ವಾಹನಗಳಿಗೆ ದಂಡ

Apr 17, 2026 - 11:57
 0  908
ನಿಯಮ ಉಲ್ಲಂಘನೆ;ಮೂರು ವಾಹನಗಳ ಮೇಲೆ‌ ಪ್ರಕರಣ,ಏಳು ವಾಹನಗಳಿಗೆ ದಂಡ

ಕುಶಾಲನಗರ; ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಲ್ಲಿಕಲ್ಲು ತುಂಬಿದ ವಾಹನಗಳು ನಿಯಮ ಉಲ್ಲಂಘಿಸಿ ಸಂಚರಿಸುತ್ತಾ ಸಾರ್ವಜನಿಕರಿಗೆ ಹಾಗೂ ಇತರ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಾದ ಗಣೇಶ್, ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಮೂರು ಟಿಪ್ಪರ್‌ಗಳ ಮೇಲೆ ಪ್ರಕರಣ ದಾಖಲಿಸಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರು ಟಿಪ್ಪರ್‌ಗಳು ಹಾಗೂ ಒಂದು ಟ್ರ್ಯಾಕ್ಟ‌ರ್ ಮೇಲೆ ಮೋಟಾರ್ ವಾಹನ ಕಾಯಿದೆ ಉಲ್ಲಂಘನೆ ಅಡಿಯಲ್ಲಿ ದಂಡ ವಿಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0